ಮುಳ್ಳೇರಿಯ : ಮುಳ್ಳೇರಿಯ ಸನಿಹದ ಪೂವಡ್ಕದಲ್ಲಿ ಚಿರತೆ ಸಂಚರಿಸಿರುವ ಬಗ್ಗೆ ವ್ಯಾಪಕ ವದಂತಿ ಹರಡಿದೆ. ಚೆರ್ಕಳ-ಜಾಲ್ಸೂರ್ ರಾಜ್ಯ ಹೆದ್ದಾರಿಯ ಮುಳ್ಳೇರಿಯ ಸನಿಹದ ಪೂವಡ್ಕ ಪ್ರದೇಶದಲ್ಲಿ ಕಾರಡ್ಕ ಜಿವಿಎಚ್‍ಎಸ್‍ಎಸ್ ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷ ಕೆ. ಸುರೇಶ್ ಸಂಚರಿಸುತ್ತಿದ್ದ ಕಾರಿಗೆ ಅಡ್ಡ ಚಿರತೆ ಸಂಚರಿಸಿದ್ದು, ಪೂವಡ್ಕದ ಟವರ್ ನಿರ್ಮಾಣ ಪ್ರದೇಶದ ಮೂಲಕ ನಟರಾಜ್ ಎಂಬವರ ತೋಟದತ್ತ ಸಾಗಿರುವುದನ್ನು ಕಂಡಿರುವುದಾಗಿ ಸಥಳೀಯರು ತಿಳಿಸಿದ್ದಾರೆ.ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ನೀಡಿದ ಮಾಹಿತಿಯನ್ವಯ ಅಧಿಕಾರಿಗಳು ಸಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದರು. ಕೊಟ್ಟಂಗುಳಿ ಅರಣ್ಯ ಪ್ರದೇಶದಲ್ಲಿ ಚಿರತೆ ಬೀಡುಬಿಟ್ಟಿರುವ ಬಗ್ಗೆ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮುಳಿಯಾರು, ಕಾರಡ್ಕ ಪಂಚಾಯಿತಿ ವಯಾಪ್ತಿಯ ವಿವಿಧೆಡೆ ಚಿರತೆ ಸಂಚರಿಸುತ್ತಿರುವ ಬಗ್ಗೆ ವದಂತಿ ಹೆನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಬೋನಿನ ಮೂಲಕ ಸಎರೆ ಹಿಡಿಯುವ ಪ್ರಯತ್ನ ನಡೆಸುತ್ತಿದ್ದರೂ, ಪ್ರಯೋಜನವಾಗಿಲ್ಲ.