ಮಧೂರು: ವಿಶ್ವ ಪಿಂಚಣಿದಾರರ ದಿನಾಚರಣೆಯ ಅಂಗವಾಗಿ ಬುಧವಾರ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಶಿಕ್ಷಕ ಬಾಲಚಂದ್ರ ಕಲ್ಲೂರಾಯ ಮಧೂರು ಅವರನ್ನು ಮಧೂರಿನಲ್ಲಿರುವ ಅವರ ಸ್ವಗೃಹದಲ್ಲಿ ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘ ಮಧೂರು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
.ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಶಿವ ನಾಯ್ಕ್ ವಹಿಸಿ, ಮಾತನಾಡಿದರು. ಗೌರವಾಧ್ಯಕ್ಷ ಕಕ್ಕೆಪಾಡಿ ವಿಷ್ಣುಭಟ್ ಮತ್ತು ನಾರಾಯಣಯ್ಯ ಶುಭಹಾರೈಸಿದರು. ಮಾಜಿ ಅಧ್ಯಕ್ಷ, ಹಾಲಿ ಬ್ಲಾಕ್ ಅಧ್ಯಕ್ಷ ಎಂ. ನಾರಾಯಣ, ಗ್ರಾಮ ಪಂಚಾಯತಿ ನಿವೃತ್ತ ಕಾರ್ಯದರ್ಶಿ ಹಾಗೂ ಬ್ಲಾಕ್ ಕಾರ್ಯದರ್ಶಿ ಬಲರಾಮ್ ಭಟ್, ಹಿರಿಯರಾದ ಬಾಲಕೃಷ್ಣ ಉಳಿಯ, ವಂದನ ಟೀಚರ್ ಮತ್ತು ಪ್ರೇಮಲತಾ ಟೀಚರ್ ಸನ್ಮಾನಿತರಾವರ ಬಗ್ಗೆ ಮಾತನಾಡಿ, ಶುಭಹಾರೈಸಿದರು. ಕಾರ್ಯದರ್ಶಿ ನೂತನ ಕುಮಾರಿ ಸ್ವಾಗತಿಸಿ, ಲೀಲಾವತಿ ಟೀಚರ್ ವಂದಿಸಿದರು. ಸತ್ಯನಾರಾಯಣ ತಂತ್ರಿ ನಿರೂಪಿಸಿದರು.