ಕಾಸರಗೋಡು : ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ವಾತಾನುಕೂಲಿತ ರೀತಿಯಲ್ಲಿ ನವೀಕರಿಸಲಾದ ವಿಡಿಯೋ ಕಾನ್‍ಫರೆನ್ಸ್ ಸಭಾಂಗಣವನ್ನು ರಾಜ್ಯ ನೋಂದವಣೆ ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಉದ್ಘಾಟಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಹೊಂದಿಕೊಂಡಿರುವ ಕೊಠಡಿಯಲ್ಲಿ ನವೀಕೃತ ವಿಡಿಯೋ ಕಾನ್‍ಫರೆನ್ಸ್ ಸಭಾಂಗಣ ಸಜ್ಜುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಪಿ. ಅಖಿಲ್, ಜಿಲ್ಲಾಧಿಕಾರಿ ಕಚೇರಿ ಸಿವಿಲ್‍ಸ್ಟೇಶನ್ ಸಿಬ್ಬಂದಿ ಉಪಸ್ಥಿತರಿದ್ದರು.