ನವದೆಹಲಿ: ರಾಜ್ಯಸಭೆಯಲ್ಲಿ ಪ್ರಜಾಪ್ರಭುತ್ವ ದಮನ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕೆ ಮುಂದುವರಿಸಿದ್ದು, ಸಭಾಪತಿ ಜಗದೀಪ್ ಧನಕರ್ ಅವರ ಪಕ್ಷಪಾತಿ ಧೋರಣೆಯನ್ನು ಗುರುವಾರ ಮತ್ತೊಮ್ಮೆ ಪ್ರಶ್ನಿಸಿದರು.
ವಿಪಕ್ಷಗಳ ಸದಸ್ಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧನಕರ್ ಸತತವಾಗಿ ದಮನ ಮಾಡುತ್ತಾ ಬಂದಿದ್ದಾರೆ.
ಬೇಕೆಂದೇ ಸತಾಯಿಸುವುದು, ನಿರ್ದಿಷ್ಟ ವಿಷಯಗಳಲ್ಲಿ ಅನಗತ್ಯವಾಗಿ ಒತ್ತಡ ಹಾಕುವುದು, ನ್ಯಾಯಯುತವಲ್ಲದ ಟೀಕೆಗಳನ್ನು ಮಾಡುವುದು, ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಮುಖ್ಯವಾದ ವಿಷಯಗಳ ಕುರಿತು ಚರ್ಚೆಗೆ ನಿರಾಕರಿಸುವುದನ್ನು ಸತತವಾಗಿ ಮಾಡಿಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.