ಕಾಸರಗೋಡು : ಕೇರಳ ರಾಜ್ಯ ಸೇವಾ ಪಿಂಚಣಿದಾರರ ಸಂಘ (ಕೆಎಸ್‍ಎಸ್‍ಪಿಎ) ಕಾಸರಗೋಡು ಮಂಡಲ ಸಮಿತಿ ವಾರ್ಷಿಕ ಸಮ್ಮೇಳನವನ್ನು ಜಿಲ್ಲಾಧ್ಯಕ್ಷ ಪಿ.ಸಿ.ಸುರೇಂದ್ರನ್ ನಾಯರ್ ಉದ್ಘಾಟಿಸಿ ಮಾತನಾಡಿ, ವಿದ್ಯುತ್ ದರ ಹೆಚ್ಚಳದಿಂದ ಜನಸಮಾನ್ಯರು ಕಂಗಾಲಾಗಿದ್ದು, ಏರಿಕೆಯಾಗಿರುವ ದರ ಕಡಿತಗೊಳಿಸಲು ಸರ್ಕಾರ ಮುಂದಬಗೇಕು ಎಂದು ಆಗ್ರಹಿಸಿದರು. ಎಂ.ಕೆ.ಚಂದ್ರಶೇಖರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎಂ.ಕೆ.ದಿವಾಕರನ್ ಪ್ರತಿನಿಧಿ ಸಮ್ಮೇಳನ ಉದ್ಘಾಟಿಸಿದರು. ಮಹಿಳಾ ವೇದಿಕೆ ರಾಜ್ಯ ಸಮಿತಿ ನಾಯಕಿ ಕೆ.ಸರೋಜಿನಿ, ರಾಜ್ಯ ಪರಿಷತ್ ಸದಸ್ಯ ಎಂ.ನಾರಾಯಣ, ಜಿಲ್ಲಾ ಜತೆ ಕಾರ್ಯದರ್ಶಿಗಳಾದ ಕುಞÂಕಣ್ಣನ್ ಕರಿಚ್ಚೇರಿ, ಪುರುಷೋತ್ತಮನ್ ಕಡಗಂ, ಜಿಲ್ಲಾ ಕೌನ್ಸಿಲರ್ ಉಷಾ.ಎಸ್, ರಾಜ್ಯ ಮಾಜಿ ಸದಸ್ಯ ಕೆ.ಪಿ. ಬಲರಾಮನ್ ನಾಯರ್, ಪಿ. ಶಶಿಧರನ್, ಮಾಯಿಲ ನಾಯ್ಕ್ ಪೆರ್ಲ, ಕೆ.ವಿ.ಮುಕುಂದನ್, ರಮಣಿ. ಕೆ. ಪುರುಷೋತ್ತಮನ್ ಅಡ್ಕ, ಕೆ.ರವೀಂದ್ರನ್, ಲೀಲಾಮಣಿ ಎಸ್, ಎಂ.ಕೆ.ಚಂದ್ರಹಾಸನ್ ನಂಬಿಯಾರ್, ಪಿ.ಎ. ಪಳ್ಳಿಕುಞ, ಕೆ.ಎನ್.ಮುರಳೀಧರನ್, ಎಂ. ಕೇಶವನ್, ಸುಶೀಲಾ ಕೆ.ಸಿ. ಉಪಸ್ಥೀತರಿದ್ದರು. ಮಂಡಲ ಸಮಿತಿ ಕಾರ್ಯದರ್ಶಿ ಸೀತಾರಾಮ ಮಲ್ಲ ಸ್ವಾಗತಿಸಿದರು. ಕೋಶಾಧಿಕಾರಿ ಟಿ.ಕೆ. ಶ್ರೀಧರನ್ ವಂದಿಸಿದರು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಎಂ.ಕೆ.ಚಂದ್ರಶೇಖರನ್ ನಾಯರ್ ಅಧ್ಯಕ್ಷ, ಎಂ. ಕೇಶವನ್, ಪುರುಷೋತ್ತಮನ್ ಅಡ್ಕ, ಸುಹರಾ ಟೀಚರ್ (ಉಪಾಧ್ಯಕ್ಷರು, ಸೀತಾರಾಮ ಮಲ್ಲ ಕಾರ್ಯದರ್ಶಿ, ಕೆ.ವಿ.ಮುಕುಂದನ್, ಬಾಲಕೃಷ್ಣನ್ ಕೊಟ್ಟಂಗುಳಿ, ಸುಶೀಲಾ ಕೆ.ಸಿ. ಜತೆ ಕಾರ್ಯದರ್ಶಿಗಳು, ಟಿ.ಕೆ.ಶ್ರೀಧರನ್ ಕೋಶಾಧಿಕಾರಿ, ತಿಲಕ .ಕೆ. ಮಹಿಳಾ ವೇದಿಕೆ ಅಧ್ಯಕ್ಷೆ ಮತ್ತು ಶೋಭನಾ ಶ್ರೀಧರನ್ ಅವರನ್ನು ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಯಿತು.