ತಿರುವನಂತಪುರ: 'ಒಂದು ದೇಶ, ಒಂದು ಚುನಾವಣೆ' ಮಸೂದೆಗೆ ಸಿಪಿಐ(ಎಂ) ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಮಂಗಳವಾರ ತೀವ್ರ ಚರ್ಚೆಯ ಬಳಿಕ 'ಒಂದು ದೇಶ, ಒಂದು ಚುನಾವಣೆ' ಮಸೂದೆಯು ಲೋಕಸಭೆಯಲ್ಲಿ ಮಂಡನೆಯಾಯಿತು.
ಕೇರಳ ಸಿಪಿಐ(ಎಂ) ಮುಖಂಡ ಹಾಗೂ ಸಂಸದ ಕೆ. ರಾಧಾಕೃಷ್ಣನ್ ಅವರು ಸುದ್ದಿಗಾರರ ಜೊತೆ ಮಾತನಾಡಿ 'ಒಂದು ದೇಶ, ಒಂದು ಚುನಾವಣೆ' ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ನಮ್ಮ ಕಾನೂನಿಗೆ ವಿರುದ್ಧವಾಗಿದ್ದು, ರಾಜ್ಯಗಳ ಸಾರ್ವಬೌಮತ್ವಕ್ಕೂ ಧಕ್ಕೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷ ಕೂಡ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಹಾಗೂ ಸಾಕಷ್ಟು ಪ್ರಾದೇಶಿಕ ಪಕ್ಷಗಳು ಕೂಡ ಏಕಕಾಲಿಕ ಚುನಾವಣೆ ನೀತಿಗೆ ವಿರೋಧ ವ್ಯಕ್ತಪಡಿಸಿವೆ. ಇದರಿಂದ ಸಣ್ಣ ಪಕ್ಷಗಳು ನಾಶವಾಗಲಿವೆ ಎಂದರು.
ಮಸೂದೆಯ ಒಪ್ಪಿಗೆ ಪಡೆಯಲು ಮಂತಯಂತ್ರದ ಮೂಲಕ ನಡೆದ ಮತ ಚಲಾವಣೆ ಪ್ರಕ್ರಿಯೆಯಲ್ಲಿ 269 ಸದಸ್ಯರು ಮಸೂದೆಯ ಪರವಾಗಿ ಹಾಗೂ 198 ಸದಸ್ಯರು ವಿರೋಧವಾಗಿ ಮತ ಹಾಕಿದ್ದಾರೆ.