ತಿರುವನಂತಪುರ: ವಿಶ್ವಕರ್ಮ ಐಕ್ಯವೇದಿ ಆಶ್ರಯದಲ್ಲಿ ನಡೆಯುತ್ತಿರುವ ಜಾಗತಿಕ ವಿಶ್ವಕರ್ಮ ಶೃಂಗಸಭೆಯನ್ನು ಕೇಂದ್ರ ಸಚಿವ ಸುರೇಶ್ ಗೋಪಿ ಉದ್ಘಾಟಿಸಿದರು.
ಐಕ್ಯವೇದಿ ಅಧ್ಯಕ್ಷ ಡಾ.ಬಿ. ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವಬ್ರಹ್ಮ ಶಂಕರಾಚಾರ್ಯ ಪೀಠಾಧೀಶ್ವರ ದಂಡಿಸ್ವಾಮಿ ಸಾಧುಕೃμÁ್ಣನಂದ ಸರಸ್ವತಿ ಆಶೀರ್ವಚನ ನೀಡಿದರು.
ವಿಶ್ವಕರ್ಮ ಮಹಾಸಭಾದ ಖಜಾಂಚಿ ಕಿಳಿರೂರು ರಾಮಚಂದ್ರನ್, ಅಖಿಲ ಭಾರತೀಯ ವಿಶ್ವಕರ್ಮ ಐಕ್ಯಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ. ತಾತನ್‍ಕೋಟ್ ಕಣ್ಣನ್, ವಿಶ್ವಕರ್ಮ ಸಭಾದ ಪ್ರಧಾನ ಕಾರ್ಯದರ್ಶಿ ಬಾಬು, ಐಕ್ಯವೇದಿ ಸಂಚಾಲಕ ವಿಜಯಕುಮಾರ್ ಮೆಲ್ವೆಟೂರ್, ವಿಶ್ವ ಸಮಸ್ತ ವಿಶ್ವಕರ್ಮ ಸಭಾದ ರಾಜ್ಯ ಉಪಾಧ್ಯಕ್ಷೆ ಸರಿತಾ ಜಗನ್ನಾಥನ್, ಉಮೇಶ್ ಕುಮಾರ್, ಸುರೇಶ್ ಎ.ಪಿ., ಗಣೇಶನ್ ಪುತ್ತಿಕಂಡಂ, ಪವಿತ್ರನ್ ವಿ.ವಿ. ನಾದಾಪುರಂ, ಕೆ.ಎಂ. ರಘು, ಟಿ.ಕೆ.ಸೋಮಶೇಖರನ್, ಕೆ.ಕೆ. ವೇಣು, ಮೊದಲಾದವರು ಮಾತನಾಡಿದರು.