ಪೆರ್ಲ: ಉದಿನೂರು ಸರ್ಕಾರಿ ಹೈಯರ್‍ಸೆಕೆಂಡರಿ ಶಾಲೆಯಲ್ಲಿ ನಡೆದ ಕಂದಾಯಜಿಲ್ಲಾ ಶಾಲಾ ಕಲೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ನಾಲ್ಕು ಮಂದಿ ವಿದ್ಯಾರ್ಥಿಗಳು'ಎ'ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರಲ್ಲಿ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹೈಸ್ಕೂಲ್ ವಿಭಾಗದ ಸಂಸ್ಕøತ ಕಥಾರಚನೆ ಸ್ಪರ್ಧೆಯಲ್ಲಿ ವಿಶ್ಮಿತಾ.ಡಿ ಅವರು ಪ್ರಥಮ ಸ್ಥಾನ ಪಡೆದು ತಿರುವನಂತಪುರ ದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಹೈಸ್ಕೂಲ್ ವಿಭಾಗದ ಸಂಸ್ಕøತ ಕವಿತಾ ರಚನೆಯಲ್ಲಿ ಮತ್ತುಕನ್ನಡ ಕವಿತಾ ರಚನೆ ಸ್ಪರ್ಧೆಯಲ್ಲಿ ತನ್ವಿ ಅವರು 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ತಿರುವನಂತಪುರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲೆ ವಿಭಾಗದ ಸಂಸ್ಕøತ ಗದ್ಯ ಪಾರಾಯಣ ಸ್ಪರ್ಧೆಯಲ್ಲಿಹಿಮಾ ಬಿ.ಆರ್ 'ಎ'ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಭಾಗದ ಸಂಸ್ಕøತ ಸಿದ್ಧರೂಪೆÇೀಚ್ಚಾರಣಂ ಸ್ಪರ್ಧೆಯಲ್ಲಿ ಸನಾ ಎಂ.ಪಿ ಅವರು 'ಎ'ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.