ಪೇಷಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಸಂಘರ್ಷದಲ್ಲಿ ತೊಡಗಿದ್ದ ಎರಡು ಬುಡಕಟ್ಟು ಸಮುದಾಯಗಳ ನಡುವೆ ಕದನ ವಿರಾಮ ಒಪ್ಪಂದ ಮೂಡಿದೆ.
ಖುರ್ರಂ ಜಿಲ್ಲೆಯಲ್ಲಿ ಅಲಿಜಾಯ್ ಮತ್ತು ಬಾಗನ್ ಬುಡಕಟ್ಟುಗಳ ನಡುವೆ ನಡೆದ ಸಂಘರ್ಷದಲ್ಲಿ 130ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಶಾಂತಿ ಸ್ಥಾಪನೆ ಆಗಿದೆ ಎಂಬುದನ್ನು ಖುರ್ರಂ ಜಿಲ್ಲಾಧಿಕಾರಿ ಜಾವೆದುಲ್ಲಾ ಮೆಹ್ಸುದ್ ಖಚಿತಪಡಿಸಿದ್ದಾರೆ. ನವೆಂಬರ್ 22ರಂದು ಪ್ರಯಾಣಿಕ ವಾಹನಗಳ ಮೇಲೆ ದಾಳಿ ನಡೆಯುವುದರೊಂದಿಗೆ ಸಂಘರ್ಷ ಆರಂಭವಾಗಿತ್ತು. ಈ ದಾಳಿಯಲ್ಲಿ 47 ಮಂದಿ ಜೀವ ಕಳೆದುಕೊಂಡಿದ್ದರು.
ಸತತ ಹನ್ನೊಂದು ದಿನಗಳವರೆಗೆ ಮುಂದುವರಿದ ಸಂಘರ್ಷವು 130 ಮಂದಿಯ ಪ್ರಾಣಹಾನಿಗೆ ಕಾರಣವಾಯಿತು. 186 ಮಂದಿ ಈ ಸಂಘರ್ಷದ ಕಾರಣದಿಂದಾಗಿ ಗಾಯಗೊಂಡಿದ್ದಾರೆ.