ಮಧೂರು: ಮಧೂರು ಗ್ರಾಮ ಪಂಚಾಯತಿ ಏರ್ಪಡಿಸಿದ 2024-25ನೇ ವರ್ಷದ ಕೇರಳೋತ್ಸವದಲ್ಲಿ ಸಮೀಪದ ಸ್ಥಳೀಯ ಸಾಂಸ್ಕøತಿಕ, ಧಾರ್ಮಿಕ ,ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿ ಕೊಂಡಿರುವ ಸಂಸ್ಥೆ ತರುಣಕಲಾವೃಂದವು ಕಲಾ ರಂಗದಲ್ಲಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ವಿಜೇತರಾದವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಯಿತು .
ರಾಜೇಶ್ ಯು.ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಯೂರ ಆಸ್ರ ಉಳಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ತರುಣ ಕಲಾವೃಂದವು ಪ್ರತಿಭಾವಂತರಿಗೆ ವೇದಿಕೆ ಒದಗಿಸುತ್ತಿರುವುದು ಶ್ಲಾಘನೀಯ ಮತ್ತು ಭಾಗವಹಿಸಿದವರು ಉಳಿದವರಿಗೆ ಸ್ಫೂರ್ತಿ ಎಂದರು
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗೌರವಾಧ್ಯಕ್ಷ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರವರು ವಿಜೇತರನ್ನು ಅಭಿನಂದಿಸಿ ,ಇಂತಹ ಅವಕಾಶಗಳನ್ನು ವಿನಿಯೋಗಿಸಲ್ಪಡಲು ಸಂಘವು ಇನ್ನಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಹೆಸರನ್ನು ಉಳಿಸಬೇಕು ಎಂದರು.
ಬಳಿಕ ಪಂಚಾಯತಿ ಮಟ್ಟದಲ್ಲಿ ವಿಜೇತರಾದ ದೇವಿಕಾ ಸಂದೀಪ್, ರಶ್ಮಿ ದೀಪಕ್, ಜಯಲಕ್ಷ್ಮಿ ರಾಜೇಶ್, ಪ್ರಮೀಳಾ ರಾಜೇಶ್, ರಿನಿ, ರಮ್ಯಾ ಉದಯ ,ಆಸಿಯಾ,ಸುಮಿತಾ ಗೋಪಾಲನ್, ದಿವ್ಯಾಗಟ್ಟಿ ಪರಕ್ಕಿಲ ಎಂಬಿವರನ್ನು ಗೌರವಿಸಲಾಯಿತು.
ಪಂಚಾಯತಿ ಮಟ್ಟದಲ್ಲಿ ಮಾತ್ರವಲ್ಲದೆ ಬ್ಲಾಕ್ ಪಂಚಾಯತಿ ಮಟ್ಟದಲ್ಲೂ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಲ್ಲಿ ವಿಜೇತರಾದ ಶರಣ್ಯ ನಾರಾಯಣನ್ ಮತ್ತು ನಿಶಾ ದಿನೇಶ್ ಎಂಬಿವರನ್ನು ಪ್ರತ್ಯೇಕವಾಗಿ ಅಭಿನಂದಿಸಲಾಯಿತು.
ಸಂಘದ ಹಿರಿಯ ಸದಸ್ಯ ಬಾಲಕೃಷ್ಣ ಉಳಿಯ, ಮಾಜಿ ಅಧ್ಯಕ್ಷ ವಿಠಲಗಟ್ಟಿ, ಉಪಾಧ್ಯಕ್ಷ ಸಂತೋï ಷ್ ಆರ್. ಗಟ್ಟಿ, ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ, ಉಪಾಧ್ಯಕ್ಷೆ ಮೀರಾ ಹರೀಶ್, ಮಾಜಿ ಅಧ್ಯಕ್ಷೆ ಮೋಹಿನಿ ಗಟ್ಟಿ ಸನ್ಮಾನಿತರ ಪರವಾಗಿ ಶರಣ್ಯಾ ನಾರಾಯಣನ್ ಮಾತನಾಡಿದರು.
ವೇದಶ್ರೀ, ಮನಸ್ವಿನಿ, ಅನೂಪ್ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪರಕ್ಕಿಲ ಸ್ವಾಗತಿಸಿ, ರಶ್ಮಿ ದೀಪಕ್ ವಂದಿಸಿದರು. ಜಯಲಕ್ಷ್ಮಿ ರಾಜೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.