ತಿರುವನಂತಪುರ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ರಾಜ್ಯ ಸರ್ಕಾರ ಕ್ಯಾಮರಾ ಕಣ್ಗಾವಲು ತೀವ್ರಗೊಳಿಸಿದೆ.
ಈ ಕ್ರಮವು ಜನವರಿ 1 ರಿಂದ ಪ್ರಾರಂಭವಾಗುವ 'ವಿರೋಧಿ' ಸಪ್ತಾಹದ ಒಂದು ಭಾಗವಾಗಿದೆ. ಸ್ಥಳೀಯಾಡಳಿತ ಸಚಿವ ಎಂ. ಬಿ. ರಾಜೇಶ್ ಈ ಬಗ್ಗೆ ಸೂಚನೆ ನೀಡಿರುವರು.
ಅಭಿಯಾನದ ಅಂಗವಾಗಿ ಎಲ್ಲಾ ಸಂಸ್ಥೆಗಳ ಪ್ರತಿನಿಧಿಗಳು, ವಸತಿ ಸಂಘಗಳು ಮತ್ತು ಇತರ ಸಂಘಗಳು ಮತ್ತು ಸ್ಥಳೀಯ ನಿವಾಸಿಗಳನ್ನು ಸೇರಿಸಿ ಜನತಾ ಸಮಿತಿಗಳನ್ನು ರಚಿಸಲಾಗುವುದು. ಇದರೊಂದಿಗೆ ಸಾರ್ವಜನಿಕ ಸಹಕಾರದೊಂದಿಗೆ ಪ್ರಮುಖ ಕೇಂದ್ರಗಳು ಮತ್ತು ಸಂಸ್ಥೆಗಳಲ್ಲಿ ಕಸ ಸಂಗ್ರಹದ ತೊಟ್ಟಿಗಳನ್ನು ಅಳವಡಿಸಿ ಅದನ್ನು ಸರಿಯಾಗಿ ನಿರ್ವಹಿಸುವಂತೆ ನೋಡಿಕೊಳ್ಳಲಾಗುವುದು. ರಾಜ್ಯ ತ್ಯಾಜ್ಯ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗುತ್ತಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಪ್ರವೃತ್ತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಜನಪರ ಅಭಿಯಾನ ಕೈಗೊಳ್ಳಲಾಗುತ್ತಿದೆ.