ಬದಿಯಡ್ಕ: ಕ್ಯಾಂಪ್ಕೋ ನಿಯಮಿತ ಮಂಗಳೂರು, ಸಂಸ್ಥೆಯಿಂದ ಸದಸ್ಯ ಬೆಳೆಗಾರರಿಗಾಗಿ ರೂಪಿಸಲಾದ ವಿವಿಧ ಸಹಾಯಧನ ಯೋಜನೆಗಳಡಿಯಲ್ಲಿ ಸಂಸ್ಥೆಯ ಸಕ್ರಿಯ ಸದಸ್ಯರ ಕುಟುಂಬದವರ ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ಒಂದು ಲಕ್ಷ ರೂಪಾಯಿ ಮೊತ್ತದ ಸಹಾಯಧನದ ಮೊದಲನೇ ಕಂತು ಐವತ್ತು ಸಾವಿರ ರೂಪಾಯಿಯನ್ನು ಕ್ಯಾಂಪ್ಕೋ ಸಂಸ್ಥೆಯ ಕಾಸರಗೋಡು ಶಾಖೆಯ ಸಕ್ರೀಯ ಸದಸ್ಯ ಕುಂಞÂಕೃಷ್ಣನ್ ಕುಂಡಂಕುಯಿ ಅವರ ಪುತ್ರಿ ಕು.ಆದಿರಾ ಕೆ ಇವರಿಗೆ ಎಂ.ಎಸ್ಸಿ. ಅಗ್ರಿಕಲ್ಚರ್ ಶಿಕ್ಷಣಕ್ಕಾಗಿ ನೀಡಲಾಯಿತು.
ಕ್ಯಾಂಪ್ಕೋ ಕುಂಡಂಕುಯಿ ಶಾಖೆಯಲ್ಲಿ ಸಂಸ್ಥೆಯ ನಿರ್ದೇಶಕ ರಾಧಾಕೃಷ್ಣನ್ ಕೆ ಹಸ್ತಾಂತರಿಸಿದರು. ಕ್ಯಾಂಪ್ಕೋ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ, ಕ್ಯಾಂಪ್ಕೋ ಕಾಸರಗೋಡು ಶಾಖಾ ವ್ಯವಸ್ಥಾಪಕ ವಿನೋದ್ ಎಂ, ಕುಂಡಂಕುಯಿ ಶಾಖಾ ವ್ಯವಸ್ಥಾಪಕ ಉಣ್ಣಿಕೃಷ್ಣನ್, ಕುಂಡಂಕುಯಿ ಸೊಸೈಟಿ ಕಾರ್ಯದರ್ಶಿ ವಿಪಿನ್ ಕೆ ಹಾಗೂ ಹರಿಶ್ರೀ ವಿದ್ಯಾಲಯ ಮಾಜಿ ಕಾರ್ಯದರ್ಶಿ ಕುಮಾರನ್ ಉಪಸ್ಥಿತರಿದ್ದರು.