ಬದಿಯಡ್ಕ: ಬೇಳ ಕುಮಾರಮಂಗಲ ಕಾಸರಗೋಡು ಗಿಡ್ಡತಳಿಯ ಫಾರ್ಮ್‍ನಲ್ಲಿ ಹಾಲು ನೀಡುವ ದನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಶುದ್ಧ ದೇಶೀಯ ತಳಿಯ ಗೋವಿನ ಹಾಲು ಅಗತ್ಯವಿದ್ದಲ್ಲಿ ಗೋಶಾಲೆಯಿಂದ ಖರೀದಿಸಬಹುದಾಗಿದೆ. ಕೆಲವು ದಿನಗಳ ಹಿಂದೆ ದಿನಕ್ಕೆ 7 ಲೀಟರ್ ಹಾಲು ಲಭಿಸುತ್ತಿದ್ದು, ಇದೀಗ ದಿನಕ್ಕೆ 30ರಿಂದ 40 ಲೀಟರ್ ತನಕ ಹಾಲು ಲಭ್ಯವಿದೆ. ಪ್ರತೀದಿನ ಬೆಳಗ್ಗೆ 10ರಿಂದ 10.30, ಸಂಜೆ 4ರಿಂದ 4.30ರ ತನಕ ಅಗತ್ಯವಿರುವವರಿಗೆ ಲೀಟರೊಂದಕ್ಕೆ 56 ರೂಪಾಯಿಯಂತೆ ದೇಶೀಯ ತಳಿಯ ಗೋವಿನ ಹಾಲನ್ನು ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಮಲಾಕ್ಷನ್ (9446023845) ಅವರನ್ನು ಸಂಪರ್ಕಿಸಬಹುದು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.