ಉಪ್ಪಳ: ಕೊಂಡೆವೂರಿನ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಒನ್‍ಸೈಟ್ ಎಸ್ಸಿಲೋರ್ ಲುಕ್ಷೋಟಿಕಾ ಫೌಂಡೇಶನ್ ಬೆಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ,ಕಾಸರಗೋಡು ಮತ್ತು ಮಂಗಳೂರು, ಡಾ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಡಿ.15 ರಂದು ಭಾನುವಾರ ಆಯೋಜಿಸಲಾಗಿದೆ. ಮತ್ತು ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಲಪಾಡಿ ಮಂಗಳೂರು ಇವರ ಸಹಯೋಗದೊಂದಿಗೆ "ಕೊಂಡೆವೂರು ಮಠದಲ್ಲಿ ಪ್ರತೀ ತಿಂಗಳು ನಡೆಯುವ ಉಚಿತ ಆಯುರ್ವೇದಿಕ್ ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವೂ ಈ ಸಂದರ್ಭ ನಡೆಯಲಿದೆ. ಬೆಳಿಗ್ಗೆ 90 ರಿಂದ ನಡೆಯುವ ಶಿಬಿರಗಳ ಉದ್ಘಾಟನೆಯಲ್ಲಿ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಲಿರುವರು, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಮಂಗಳೂರಿನ ಶಾರದ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಮ್.ಬಿ. ಪುರಾಣಿಕ್ ಶಿಬಿರ ಉದ್ಘಾಟಿಸುವರು. ಟ್ರಸ್ಟಿಗಳಾದ ಮೋನಪ್ಪ ಭಂಡಾರಿ, ಶಶಿಧರ ಶೆಟ್ಟಿ ಗ್ರಾಮಚಾವಡಿ, ಸಮೀರ್ ಪುರಾಣಿಕ್ (ನಿರ್ದೇಶಕರು ಮತ್ತು ಟ್ರಸ್ಟಿ ಶಾರದ ಸಮೂಹ ಸಂಸ್ಥೆಗಳು ಮಂಗಳೂರು)ಡಾ. ಸಂದೀಪ್ ಬೇಕಲ್ ಆರ್( ಪ್ರಾಂಶುಪಾಲರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು,ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಲಪಾಡಿ ಮಂಗಳೂರು) ಡಾ. ಲಿಖಿತ್, ರೈ. ಜನರಲ್ ಸರ್ಜನ್ ಕಣಚೂರು ಮೆಡಿಕಲ್ ಕಾಲೇಜು, ಡಾ. ವಿವೇಕ್‍ಜೆ(ಬಿ.ಎ.ಎಮ್.ಎಸ್,ಎಮ್.ಎಸ್(ಆಯು)ಡಿವಿಪಿ ಪಿಹೆಚ್‍ಡಿ ಆಯುರ್ವೇದ ಶಸ್ತ್ರಚಿಕಿತ್ಸಕರು ಮತ್ತು ಕ್ಯಾನ್ಸರ್ ತಜ್ಞರು) ವಿವೇಕ್ ತಂತ್ರಿ, (ಆಡಳಿತಾಧಿಕಾರಿಗಳು ಶಾರದ ಸಮೂಹ ಸಂಸ್ಥೆಗಳು ಮಂಗಳೂರು)ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.
ಬೆಳಿಗ್ಗೆ 8.ರಿಂದ ಶಿಬಿರದ ನೋಂದಾವಣೆ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೊಂಡೆವೂರು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.