ಬದಿಯಡ್ಕ: ಉದಿನೂರು ಜಿಎಚ್‍ಎಸ್‍ಎಸ್‍ನಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಕಲೋತ್ಸವದಲ್ಲಿ ಯುಪಿ ವಿಭಾಗದ ಸಂಸ್ಕೃತ ಸಂಘಗಾನದಲ್ಲಿ ಎ ಗ್ರೇಡ್‍ನೊದಿಗೆ ಪ್ರಥಮ ಸ್ಥಾನವನ್ನು ಬದಿಯಡ್ಕ ವಿದ್ಯಾಪೀಠದ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ತಂಡದಲ್ಲಿ ಅಭಿಜ್ಞಾ, ಸಾವಿತ್ರಿ ಪಿ., ಶ್ರೇಯಾ ಟಿ., ಅಂಜಲಿ ಎಸ್., ಮನಸ್ವಿನಿ ಎ., ಅನಿಕಾ ಕೆ.ಎ., ಸಂಜನಾ ಬಿ., ಆತ್ಮೀಕಾ ಗುಣಾಜೆ ಭಾಗವಹಿಸಿದರು. ಇವರನ್ನು ಶಾಲಾ ಆಡಳಿತ ಮಂಡಳಿ, ಮುಖ್ಯಶಿಕ್ಷಕರು ಹಾಗೂ ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.