ಕಾಸರಗೋಡು: ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಕೇರಳಾದ್ಯಂತ ಬಿರುಸಿನ ಮಳೆಯಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಮಧ್ಯಾಹ್ನ ಭಾರಿ ಗುಡುಗಿನೊಂದಿಗೆ ಮಳೆ ಆರಂಭಗೊಂಡಿದೆ. ಮಲೆನಾಡು ಪ್ರದೇಶದಲ್ಲೂ ಬಿರುಸಿನ ಮಳೆಯಾಗುತ್ತಿದೆ. ಕಾಸರಗೋಡಿನ ವಿವಿಧೆಡೆ ನಡೆಯುತ್ತಿರುವ ಹೆದ್ದಾರಿ ಷಟ್ಪಥ ಕಾಮಗಾರಿ ಅಯೋಮಯವಾಗಿದೆ. ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ಅಗೆಯಲಾದ ಹೊಂಡದಲ್ಲಿ ನೀರು ತುಂಬಿಕೊಂಡು ಸಂಪೂರ್ಣ ಕೆಸರುಮಯವಾಗಿದೆ. ಕುಂಬಳೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಮಡು ವಾಹನ ಸಂಚಾರ ದುಸ್ತರವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾಗೃತಾ ನಿರ್ದೇಶ ಜಾರಿಗೊಳಿಸಿದೆ.
(ಚಿತ್ರ-01)ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ ಬಿರುಸಿನ ಮಳೆಗೆ ಡ್ರೈನೇಜ್ ಕುಸಿದು ಖಾಸಗಿ ಬಸ್ ರಸ್ತೆ ಸನಿಹದ ಕಂಬಕ್ಕೆ ವಾಲಿ ನಿಂತಿದೆ.)ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಡಿ. 3ರಂದು ವೃತ್ತಿಪರ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ರಜೆ ಘೋಷಿಸಿದ್ದಾರೆ. ಟ್ಯೂಷನ್ ಕೇಂದ್ರಗಳು, ಅಂಗನವಾಡಿಗಳು ಮತ್ತು ಮದರಸಾಗಳಿಗೂ ರಜೆ ಅನ್ವಯಿಸಲಿದೆ. ಮಾದರಿ ವಸತಿ ಶಾಲೆಗಳಿಗೆ ರಜೆ ಅನ್ವಯಿಸುವುದಿಲ್ಲ.
ಕಣ್ಣೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಕಣ್ಣೂರು ಜಿಲ್ಲೆಯಲ್ಲಿ ಸಓಮವಾರವೂ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿತ್ತು. ಕಾಸರಗೋಡು ಜಿಲ್ಲೆಯಲ್ಲಿ ಕರಾವಳಿ ಪ್ರದೇಶ ಹಾಗೂ ಚಾರಣ ಪ್ರದೇಶಗಳನ್ನು ಮುಚ್ಚುಗಡೆಗೊಳಿಸಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಮಂಜೇಶ್ವರಂ ತಾಲೂಕಿನಲ್ಲಿ ಎಡಿಎಂ ಪಿ.ಅಖಿಲ್, ಕಾಸರಗೋಡು ತಾಲೂಕಿನಲ್ಲಿ ಆರ್‍ಡಿಒ ಪಿ.ಬಿನುಮೋನ್, ಕಾಞಂಗಾಡ್ ತಾಲೂಕಿನಲ್ಲಿ ಎಲ್‍ಎಎನ್‍ಎಚ್ ಡೆಪ್ಯುಟಿ ಕಲೆಕ್ಟರ್ ಎಸ್.ಬಿಜು ಮತ್ತು ವೆಳ್ಳರಿಕುಂಡ್ ತಾಲೂಕಿನಲ್ಲಿ ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್ ಜಿಲ್ಲಾ ಮಟ್ಟದಲ್ಲಿ ಪರಿಹಾರಕಾರ್ಯಗಳ ಸಮನ್ವಯಾಧಿಕಾರಿಗಳಾಗಿ ಕೆಲಸ ನಿವ್ಹಿಸಲಿದ್ದಾರೆ.
(ಚಿತ್ರ-02) ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಮಡು ವಆಹನ ಸಂಚಾರ ದುಸ್ತರವೆನಿಸಿದೆ.)ತುರ್ತು ಸಭೆ:
ಕೇಂದ್ರ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಿರ್ಧರಿಸಿದೆ. ಎಡಿಎಂ ಪಿ ಅಖಿಲ್ ಅಧ್ಯಕ್ಷತೆಯಲ್ಲಿ ನಡೆದ ಆನ್‍ಲೈನ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಮಲೆನಾಡು ಪ್ರದೇಶಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆರ್ಕಳ-ಚಟ್ಟಂಚಾಲ್, ಚೆರುವತ್ತೂರು ವೀರಮಲಕುನ್ನು ಮತ್ತು ಇತರ ಪ್ರದೇಶಗಳು ನಿರ್ಮಾಣ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಮುಂಜಾಗ್ರತೆ ಪಾಲಿಸಲು ಸೂಚಿಸಲಾಘಿದೆ. ಕಂದಾಯ, ಅಗ್ನಿಶಾಮಕ, ಪೆÇಲೀಸ್, ಆರೋಗ್ಯ, ಸ್ಥಳೀಯಾಡಳಿತ, ಮೀನುಗಾರಿಕೆ ಮುಂತಾದ ಇಲಾಖೆಗಳಿಗೆ ಎಚ್ಚರಿಕೆ ವಹಿಸುವಂತೆ ಎಡಿಎಂ ಸೂಚನೆ ನೀಡಿದ್ದಾರೆ.