ಹೈದರಾಬಾದ್: ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಬಲವರ್ಧನೆಗೆ ಸಹಕಾರ ನೀಡುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಲ್ಲ ಬಳಿ ಸೋಮವಾರ ಬೆಂಬಲ ಕೋರಿದರು.
ನಾದೆಲ್ಲ ಜೊತೆ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದ ರೆಡ್ಡಿ, 'ತಂತ್ರಜ್ಞಾನ ಕ್ಷೇತ್ರದಲ್ಲಿ ಹೈದರಾಬಾದ್ ವಿಶ್ವದ ಮುಂಚೂಣಿ ನಗರವಾಗಲು ಸಹಕರಿಸಿ' ಎಂದರು.
ಎಐ, ಕ್ಲೌಡ್ ಸೇರಿದಂತೆ ವಿವಿಧ ತಂತ್ರಜ್ಞಾನದ ಕುರಿತಂತೆ, ಭವಿಷ್ಯದ ಬೆಳವಣಿಗೆಯ ಬಗ್ಗೆ ಮುಖ್ಯಮಂತ್ರಿ ರೇವಂತ ರೆಡ್ಡಿ, ಐಟಿ ಸಚಿವ ಡಿ. ಶ್ರೀಧರ ಬಾಬು ಅವರು ಸತ್ಯ ನಾದೆಲ್ಲ ಜೊತೆ ಚರ್ಚಿಸಿ ಮೈಕ್ರೊಸಾಫ್ಟ್‌ನ ಬೆಂಬಲವನ್ನು ಕೋರಿದರು ಎಂದು ಪ್ರಕಟಣೆ ತಿಳಿಸಿದೆ.