ಮುಳ್ಳೇರಿಯ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಶಿವಶಕ್ತಿ ಮಹಾಯಾಗ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ವೈದಿಕ ವಿದ್ವಾಂಸರ ಮಂತ್ರಘೋಷದೊಂದಿಗೆ ಊರ ಪರವೂರ ಭಗವದ್ಭಕ್ತರ ಪ್ರಾರ್ಥನೆಯೊಂದಿಗೆ ಜರಗಿತು.
ಪ್ರಾತಃಕಾಲ ಗಣಪತಿ ಹೋಮ ನಡೆಯಿತು. ಹೋಮ ಪೂರ್ಣಾಹುತಿಯ ಸಂದಭರ್Àದಲ್ಲಿ ಪರಮಪೂಜ್ಯ ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದಿವ್ಯಸಾನ್ನಿಧ್ಯ ವಹಿಸಿದ್ದರು.
ಆನುವಂಶಿಕ ಮೊಕ್ತೇಸರ ಪಿ.ಎಸ್.ಪುಣಿಂಚಿತ್ತಾಯ, ಶಿವಶಕ್ತಿ ಮಹಾಯಾಗ ಸಮಿತಿ ಅಧ್ಯಕ್ಷ ಮಧುಸೂದನ ಆಯರ್, ಉದ್ಯಮಿ ಶಿವಶಂಕರ ನೆಕ್ರಾಜೆ, ಊರಪರವೂರ ಸಹಸ್ರಾರು ಭಗವದ್ಭಕ್ತರು ಮಹಾಯಾಗದಲ್ಲಿ ಪಾಲ್ಗೊಂಡಿದ್ದರು.