ಪೆರ್ಲ: ಕಾಟುಕುಕ್ಕೆ ಬಾಳೆಮೂಲೆ ನಿವಾಸಿ, ಶತಾಯುಷಿ, ಪ್ರಗತಿಪರ ಕೃಷಿಕ ತ್ಯಾಂಪಣ್ಣ ರೈ (100)ಸ್ವಗೃಹದಲ್ಲಿ ನಿಧನರಾದರು. ಎಣ್ಮಕಜೆ ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಸಂದರ್ಭ ಪಾರಂಪರಿಕ ಕೃಷಿಕರಿಗಿರುವ ಗೌರವಾರ್ಪಣೆ ಸಮಾರಂಭದಲ್ಲಿ ಅಮೃತ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಅವರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.