ಕಾಸರಗೋಡು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 60 ಮಂದಿ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ವಾರ್ಷಿಕ ಯೋಜನೆಯನ್ವಯ ತಲಶ್ಶೇರಿಯ ಎನ್‍ಟಿಟಿಎಫ್ ಸಹಯೋಗದಲ್ಲಿ ಕೌಶಲ್ಯ ತರಬೇತಿ ನೀಡಲಾಗುತ್ತದೆ.
ಕೌಶಲ್ಯ ತರಬೇತಿಗಾಗಿ ಕಾಸರಗೋಡಿನಿಂದ ತೆರಳುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಸಂಚರಿಸುವ ವಾಹನಕ್ಕೆ ಸಿವಿಲ್‍ಸ್ಟೇಶನ್ ವಠಾರದಲ್ಲಿ ನಡೆದ ಸಮರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣ ಧ್ವಜ ತೋರಿಸಿ ಬೀಳ್ಕೊಟ್ಟರು. ಜಿಲ್ಲಾ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಮನು ಅಧ್ಯಕ್ಷತೆ ವಹಿಸಿದ್ದರುÁಗಿಸಿದರು ಎನ್ ಟಿಟಿಎಫ್ ವಿಭಾಗೀಯ ವ್ಯವಸ್ಥಾಪಕ ವಿ.ಕೆ.ರಾಧಾಕೃಷ್ಣನ್ ಯೋಜನೆ ವಿವರಿಸಿದರು. ಅಡ್ವ.ಎಸ್.ಎನ್.ಸರಿತಾ, ಕೆ.ಶಕುಂತಲಾ, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ರವಿರಾಜ್, ಸ್ಥಾಯಿ ಸಮಿತಿ ಅಧ್ಯಕ್ಷರು ಕಾಸರಗೋಡು ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಕೆ.ಕೇಮೋಹನದಾಸ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಎನ್‍ಟಿಟಿಎಫ್ ಹಿರಿಯ ಅಧಿಕಾರಿ ವಿಕಾಸ್ ಪಾಲೇರಿ ಮಾತನಾಡಿದರು.