ಕಾಸರಗೋಡು : ಕಾವುಗೋಳಿ ಕಡಪ್ಪುರದ ದಡದಲ್ಲಿ ನಿಂತು ಮೀನು ಹಿಡಿಯಲು ಬಲೆಬೀಸುವ ಸಂದರ್ಭ ನೀರು ಪಾಲಾಗಿದ್ದ ಮೊಗ್ರಾಲ್‍ಪುತ್ತೂರು ಕಾವುಗೋಳಿ ಕಡಪ್ಪುರ ನಿವಾಸಿ ವಿನೋದ್(38)ಅವರ ಮೃತದೇಹ ಮೊಗ್ರಾಲ್‍ಪುತ್ತೂರಿನ ಸಮುದ್ರದಲ್ಲಿ ಪತ್ತೆಯಾಗಿದೆ. ಗುರುವಾರ ಸಂಜೆ ಕಾವುಗೋಳಿ ಕಡಪ್ಪುರದಲ್ಲಿ ವಿನೋದ್ ನೀರಿಗೆ ಬಿದ್ದು ನಾಪತ್ತೆಯಾಘಿದ್ದರು. ತಕ್ಷಣ ಸ್ಥಳೀಯ ಮೀನುಗಾರರು, ಕರಾವಳಿ ಪೊಲೀಸ್ ಹಾಗೂ ನಾಗರಿಕರು ಹುಡುಕಾಟ ನಡೆಸಿದರೂ ಪ್ರಯೋಜನವಾಘಿರಲಿಲ್ಲ.