ಕಾಸರಗೋಡು: ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಕಾಸರಗೋಡು ಅಬಕಾರಿದಳ ವತಿಯಿಂದ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಕಾಸರಗೋಡು ಅಬಕಾರಿ ಗುಪ್ತಚರ ಮತ್ತು ತನಿಖಾ ಬ್ಯೂರೋ ಅಬಕಾರಿ ಪ್ರಿವೆಂಟಿವ್ ಆಫೀಸರ್ ಇ. ಕೆ. ಬಿಜೋಯ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಲವು ಅಬಕಾರಿ ಅಪರಾಧಗಳ ಆರೋಪಿ ರೋಸ್‍ಚಂದ್ರನ್ ಎಂಬಾತನನ್ನು ಬಂಧಿಸಲಾಗಿದೆ.
ಅನಧಿಕೃತ ಮದ್ಯ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದ ಈತನನ್ನು ಕಾಸರಗೋಡು ತಾಲೂಕಿನ ಕಳನಾಡು ಗ್ರಾಮದ ಕಳನಾಡು ಗ್ರಾಮದ ಚೆಡಿಕ್ಕಂಪಾನಿ ಎಂಬಲ್ಲಿಂದ ಬಂಧಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ವೆಳ್ಳರಿಕುಂಡು ಮಾಲೋಂ ಗ್ರಾಮದ ಪಡಯಂಕಲ್ಲು ಎಂಬಲ್ಲಿ ನೀಲೇಶ್ವರ ಅಬಕಾರಿ ದಳ ಸಇಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಮದ್ಯ ತಯಾರಿಗೆ ಸಂಗ್ರಹಿಸಿಡಲಾಗಿದ್ದ 50ಲೀ. ಹುಳಿರಸ ಮತ್ತು ಎರಡು ಲೀ. ಕಳ್ಳಬಟ್ಟಿ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ಪತ್ತೆಯಾಗಿಲ್ಲ. ಕಾಸರಗೋಡು ಕರಂದಕ್ಕಾಡಿನಲ್ಲಿ ಕಸರಗೋಡು ಅಬಕಾರಿ ದಳ ಸಇಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ 4.32ಲೀ. ವಿದೇಶಿ ಮದ್ಯ ವಶಫಡಿಸಿಕೊಂಡು, ಬೆದ್ರಡ್ಕ ನಿವಾಸಿ ಮನೋಜ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.