ಮಂಜೇಶ್ವರ: ಸಾಮರಸ್ಯ ಹಾಗೂ ಸಹಜೀವನ ಇಂದಿನ ಕಾಲಘಟ್ಟದ ಅನಿವಾರ್ಯತೆಗಳಲ್ಲಿಒಂದಾಗಿದೆ ಎಂಬುದಾಗಿ ಅತೀ ವಂದನೀಯ ಸ್ವಾಮಿ ಬಾಸಿಲ್ ವಾಜ್ ತಿಳಿಸಿದ್ದಾರೆ. ಅವರು ವರ್ಕಾಡಿಯಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದಕೂಟ ಹಾಗೂ ಕ್ರಿಕೆಟ್ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು.
ವರ್ಕಾಡಿಯಲ್ಲಿ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ಕಳಿಯೂರು, ಕಾಪಿರಿ ಎಯುಪಿ ಶಾಲೆ, ಸೈಂಟ್ ಮೇರಿಸ್ ಸಿಬಿಎಸ್‍ಸಿ ಶಾಲೆ ಮತ್ತು ಅಂತರ ಧರ್ಮೀಯ ಅಯೋಗ ವರ್ಕಾಡಿ ಇವುಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು
ಮಂಗಳೂರು ವಿಶ್ವ ವಿದ್ಯಾಲಯದ ಕ್ರೈಸ್ತವಿದ್ಯಾಪೀಠದ ಮುಖ್ಯಸ್ಥ ವಂದನೀಯ ಐವನ್ ಡಿಸೋಜ ಸಮಾರಂಭ ಉದ್ಘಾಟಿಸಿದರು. ಕ.ಸಾ.ಪ. ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ತೊಟ್ಟೆತೋಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಬಂಟ್ವಾಳದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಲೇಖಕ ರಜಾಕ್ ಅನಂತಾಡಿ, ಕರ್ನಾಟಕದ ಸರ್ಕಾರದ ಗಡಿಪ್ರದೇಶ ಅಭಿವ್ರದ್ಧಿ ಪ್ರಾಧಿಕಾರದ ಸದಸ್ಯ ಎ. ಆರ್ ಸುಬ್ಬಯ್ಯಕಟ್ಟೆ, ಇಗರ್ಜಿ ಸಹಾಯಕ ಗುರುಗಳಾದ ವಂದನೀಯ ಸಂತೋಷ್ ಡಿ ಸೋಜ,ಪಾಲನಾ ಪರಿಷತ್ ಉಪಾದ್ಯಕ್ಷ ರಾಜೇಶ್ ಡಿ ಸೋಜ, ಕಾನ್ವೆಂಟ್‍ಗಳ ಮುಖ್ಯಸ್ಥರಾದ ಸಿ. ಶಾಂತಿ ಹಾಗೂ ಸಿ.ಮೊಂತಿನ್ ಗೋಮ್ಸ್, ಕಥೋಲಿಕ ಸಭಾ ಅಧ್ಯಕ್ಷ ಅಶೋಕ್ ಡಿ ಸೋಜ, ಸೌಹಾರ್ಧ ಸಮಿತಿ ಅದ್ಯಕ್ಷ ಯೇಸು ಪ್ರಸಾದ್, ಕಳಿಯೂರು ಮತ್ತು ಕಾಪಿರಿ ಶಾಲೆಗಳ ಮುಖ್ಯೋಪಧ್ಯಾಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂದ್ಯಾ ಡಿಸೋಜ ಸ್ವಾಗತಿಸಿದರು. ಅನಿತಾ ಡಿಸೋಜ ವಂದಿಸಿದರು. ಈ ಸಂದರ್ಭ ಕ್ರಿPಕೆಟ್ ಪಂದ್ಯಾಟ ಜರುಗಿತು.