ಮುಳ್ಳೇರಿಯ: ಆದೂರು ಶ್ರೀಭಗವತಿ ದೈವಸ್ಥಾನದಲ್ಲಿ 2025 ರ ಜನವರಿ 19 ರಿಂದ 24 ರವರೆಗೆ ನಡೆಯಲಿರುವ ಪೆರುಂಕಳಿಯಾಟ ಮಹೋತ್ಸವದ ಪ್ರೋಮೋ ವಿಡಿಯೋವನ್ನು ಬುಧವಾರ ಶ್ರೀಕ್ಷೇತ್ರದಲ್ಲಿ ಧ್ವನಿ ಕಲಾವಿದ ಕರಿವೆಳ್ಳೂರ್ ರಾಜನ್ ಬಿಡುಗಡೆಗೊಳಿಸಿದರು.
ಬಿಡುಗಡೆ ಸಮಾರಂಭದಲ್ಲಿ ವಿವಿಧ ಸ್ಥಳೀಯ ಸಮಿತಿ ಸದಸ್ಯರು ಹಾಗೂ ಮಾತೃ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಪೆರುಂಕಳಿಯಾಟ ಪ್ರಚಾರ ಸಮಿತಿ ನೇತೃತ್ವದಲ್ಲಿ ಪ್ರೋಮೋ ವಿಡಿಯೋ ಸಿದ್ಧಪಡಿಸಲಾಗಿತ್ತು.
ಸಮಾರಂಭದಲ್ಲಿ ಪ್ರಚಾರ ಸಮಿತಿ ಉಪಾಧ್ಯಕ್ಷ ಕೆ.ಜಿ.ಮನೋಹರನ್ ಅಧ್ಯಕ್ಷತೆ ವಹಿಸಿದ್ದರು. ದೈವಸ್ಥಾನ ಸಮಿತಿ ಅಧ್ಯಕ್ಷ ದಾಮೋದರನ ಕಾವುಗೋಳಿ, ಪೆರುಂಕಳಿಯಾಟ ಆಚರಣಾ ಸಮಿತಿ ಉಪಾಧ್ಯಕ್ಷ ಕುಂಜಿರಾಮನ್ ನಾಯರ್, ದೇವಸ್ಥಾನ ಸಮಿತಿ ಕಾರ್ಯದರ್ಶಿ ಮಾಧವನ್ ಭಂಡಾರವೀಡು, ಮಾತೃ ಸಮಿತಿ ಸಂಚಾಲಕಿ ಜನನಿ, ಪೆರುಂಕಳಿಯಾಟ ಸಂಚಾಲಕ ಅನಿಲ್ ಕುಮಾರ್, ಪ್ರಚಾರ ಸಮಿತಿ ಸಂಚಾಲಕ ಹರಿಪ್ರಸಾದ್ ಅಡೂರು, ಪ್ರಶಾಂತ್ ಕುಮಾರ್ ಮಾತನಾಡಿದರು.