ಕುಂಬಳೆ: ಪಚ್ಚಂಬಳದಲ್ಲಿ ಹೊಸ ಥಾರ್ ವಾಹನ ಏಕಾಏಕಿ ಬೆಂಕಿ ತಗುಲಿದ ಪರಿಣಾಂ ಸಂಪೂರ್ಣ ಉರಿದು ನಾಶಗೊಂಡಿದೆ. ಹೊಸಂಗಡಿ ನಿವಾಸಿಯೊಬ್ಬರ ಹೆಸರಲ್ಲಿ ತಾತ್ಕಾಲಿಕ ನೋಂದಾವಣೆ ಹೊಂದಿರುವ ಹೊಸ ವಾಹನ ಇದಾಗಿದ್ದು, ಚಾಲನಾ ತರಬೇತಿಗಾಗಿ ಯುವಕರನ್ನು ಹೊಂದಿದ್ದ ತಂಡ ಗುರುವಾರ ಮಧ್ಯಾಹ್ನ ಪಚ್ಚಂಬಳ ಮೈದಾನಕ್ಕೆ ತಲುಪಿದ್ದರು. ಅಭ್ಯಾಸ ಸಂಚಾರ ನಡೆಸುವ ಮಧ್ಯೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ವಾಹನದಲ್ಲಿದ್ದವರು ಕೆಳಗಿಳಿದು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ತಕ್ಷಣ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಶಮನಗೊಳಿಸಿದರೂ, ವಾಹನ ಸಂಪೂರ್ಣ ಉರಿದು ನಾಶವಾಗಿತ್ತು. ಬೆಂಕಿ ಆಕಮಸ್ಮಿಕ್ಕೆ ಕಾರಣ ತಿಳಿದು ಬಂದಿಲ್ಲ.