ಸಂಧಿನೋವಿನ ಸಮಸ್ಯೆ ಇರುವವರೆಗೆ ಚಳಿಗಾಲ ತುಂಬಾನೇ ಕಷ್ಟ, ಮಂಡಿ ನೋವು, ಕೈಗಳಲ್ಲಿ ನೋವು ಹೆಚ್ಚಾಗುವುದು, ಮೂಳೆಗಳು ದುರ್ಬಲವಾಗುವುದು. ಚಳಿಗಾಲದಲ್ಲಿ ಮೂಳೆ ನೋವಿನ ಸಮಸ್ಯೆ ಹೆಚ್ಚಾಗುವುದೇಕೆ?
ಸಂಧಿವಾತ ಸಮಸ್ಯೆ ಇರುವವರು ಚಳಿಗಾಲದಲ್ಲಿ ದೇಹದ ಆರೈಕೆ ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಡಾ. ಲೋಕೇಶ್ ಎ, ವಿ ( Consultant - Orthopaedics, Joint Replacement, and Robotic Surgery, Manipal Hospital Old Airport Road) ನಮ್ಮ ಓದುಗರಿಗೆ ಕೆಲ ಉಪಯುಕ್ತ ಮಾಹಿತಿ ನೀಡಿದ್ದಾರೆ ನೋಡಿ:
ಚಳಿಗಾಲದಲ್ಲಿ ಮೂಳೆ ದುರ್ಬಲವಾಗುವುದೇಕೆ?
ಚಳಿಗಾಲದಲ್ಲಿ ಮೂಳೆಯ ಸಮಸ್ಯೆ ಕಂಡು ಬರಲು ಪ್ರಮುಖ ಕಾರಣವೆಂದರೆ
ಚಳಿಗಾಲದಲ್ಲಿ ಮೈಗೆ ಸೂರ್ಯನ ಬೆಳಕು ಬೀಳುವುದು ತುಂಬಾ ಕಡಿಮೆ, ಸೂರ್ಯನ ಕಿರಣಗಳು ಮೈ ಮೇಲೆ ಬೀಳದಿದ್ದಾಗ ವಿಟಮಿನ್ ಡಿ ಕೊರತೆ ಉಂಟಾಗುವುದು, ಇದರಿಂದ ಮೂಳೆಗಳು ದುರ್ಬಲವಾಗುವುದು.ಮೂಳೆಗಳು ಕ್ಯಾಲ್ಸಿಯಂ ಹೀರಿಕೊಳ್ಳದೆ ಕ್ಯಾಲ್ಸಿಯಂ ಕೊರತೆ ಉಂಟಾಗುವುದು, ಮೂಳೆಗಳಲ್ಲಿ ಗಟ್ಟಿತನ ಕಡಿಮೆಯಾಗುವುದು ಈ ಬಗೆಯ ಸಮಸ್ಯೆ ಉಂಟಾಗುವುದುಂಟು.
ಎರಡನೇಯ ಕಾರಣವೆಂದರೆ: ದೈಹಿಕ ಚಟುವಟಿಕೆ ಕಡಿಮೆ ಇರುತ್ತದೆ
ಚಳಿಗಾಲದಲ್ಲಿ ಸ್ಪೋರ್ಟ್ಸ್ ಚಟುವಟಿಕೆ ಕಡಿಮೆಯಾಗುವುದು. ಬೆಳಗ್ಗೆ ಚಳಿಯಲ್ಲಿ ಓಡಾಡುವುದು ಕಷ್ಟ ಎಂದು ತುಂಬಾ ಜನರು ವಾಕ್ ಮಾಡುವುದು, ವರ್ಕೌಟ್ ಮಾಡುವುದು ನಿಲ್ಲಿಸಿ ಬಿಡುತ್ತಾರೆ. ನಾವು ದೈಹಿಕವಾಗಿ ಚಟಯವಟಿಕೆಯಿಂದ ಇದ್ದಷ್ಟೂ ಮೂಳೆಗಳು ಗಟ್ಟಿಯಾಗಿರುತ್ತದೆ. ಮನೆಯ ಒಳಗಡೆಯೇ ಹೆಚ್ಚು ಇರುವುದು, ಹೊರಗಡೆ ಓಡಾಡುವುದು ಕಡಿಮೆ ಮಾಡಿದರೆ ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನೆಯ ಒಗಡೆ ಇದ್ದಾಗ ಸೂರ್ಯನ ಕಿರಣಗಳು ನಮ್ಮ ಮೈ ಮೇಲೆ ಅಷ್ಟಾಗಿ ಬೀಳುವುದಿಲ್ಲ, ಅದೇ ಹೊರಗಡೆ ಓಡಾಡಿದಾಗ ಸೂರ್ಯನ ಕಿರಿಣಗಳು ಮೈಗೆ ತಾಗುತ್ತದೆ. ಮನೆಯ ಒಳಗಡೆ ಅಧಿಕ ಹೊತ್ತು ಇದ್ದಾಗ ಮೂಳೆಗಳು ಬಿಗಿಯಾಗಿ ನೋವು ಉಂಟಾಗುವುದು.
ಚಳಿಗಾಲದಲ್ಲಿ ಸಂಧಿವಾತ ಸಮಸ್ಯೆ ಹೆಚ್ಚಾಗುವುದೇಕೆ?
ಚಳಿಗಾಲದಲ್ಲಿ ಹೆಚ್ಚು ನೋವಿನ ಅನುಭವ ಉಂಟಾಗುವುದು, ಅದೇ ಬೇಸಿಗೆ ಕಾಲದಲ್ಲಿ ಅಷ್ಟಾಗಿ ಗೊತ್ತಾಗುವುದಿಲ್ಲ, ಹಾಗಾಗಿ ಚಳಿಗಾಲದಲ್ಲಿ ಸಂಧಿವಾತ ಸಮಸ್ಯೆ ಇರುವವರೆಗೆ ನೋವಿನ ಪ್ರಮಾಣ ಕೂಡ ಅಧಿಕವಾದಂತೆ ಅನಿಸುವುದು.
ಚಳಿಗಾಲದಲ್ಲಿ ಅಪಘಾತಗಳು ಕೂಡ ಹೆಚ್ಚಾಗುವುದು
ಚಳಿಗಾಲದಲ್ಲಿ, ಐಸ್ ಇರುವ ಪ್ರದೇಶದಲ್ಲಿ ಅಪಘಾತ ಹೆಚ್ಚಾಗುತ್ತದೆ ಎಂದು ಅಂಕಿಅಂಶ ಹೇಳುತ್ತದೆ. ಚಳಿಯಲ್ಲಿ ಡ್ರೈವ್ ಮಾಡುವುದು ಕಷ್ಟವಾಗುವುದು, ಗಾಡಿಯನ್ನು ಓಡಿಸುವಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ಚಳಿಗಾದಲ್ಲಿ ಬೇಸಿಗೆಗಿಂತ ಹೆಚ್ಚು ಅಪಘಾತಗಳು ಸಂಭವಿಸುವುದು.
ಚಳಿಗಾಲದಲ್ಲಿ ಮೂಳೆಯ ಆರೋಗ್ಯ ಸಂಬಂಧಿಸಿದಂತೆ ಆಹಾರಕ್ರಮದ ಕಡೆಗೆ ಗಮನಹರಿಸಬೇಕು
ಚಳಿಗಾಲದಲ್ಲಿ ಕ್ಯಾಲ್ಸಿಯಂ ಅಧಿಕವಿರುವ ಆಹಾರ ಸೇವಿಸಬೇಕು. ಚಳಿಗಾಲದಲ್ಲಿ ಮೈ ಬೆಚ್ಚಗಿಡುವ ಆಹಾರಗಳನ್ನು ಸೇವಿಸಬೇಕು.
ಬಿಸಿಲಿನಲ್ಲಿ ಸ್ವಲ್ಪ ಹೊತ್ತು ನಿಲ್ಲಿ: ಬಿಸಿಲು ಬೀಳುವುದು ಸ್ವಲ್ಪ ತಡವಾಗಬಹುದು, ಆದರೆ ದಿನಾ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲಿ.
ದೈಹಿಕ ವ್ಯಾಯಾಮ ಮಾಡಿ. ಹೊರಗಡೆ ನಡೆಯುವ ಅಥವಾ ಜಾಗಿಂಗ್ ಈ ಬಗೆಯ ವ್ಯಾಯಾಮ ಮಾಡಿ
ಇವೆಲ್ಲಾ ಮೂಳೆಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.