ಕುಂಬಳೆ: ಅಡ್ಕ ಬ್ರದರ್ಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಇದರ 30ನೇ ವಾಷಿಕೋತ್ಸವÀದಂಗವಾಗಿ ಆಯೋಜಿಸುವ ಅಖಿಲ ಭಾರತ ವಾಲಿಬಾಲ್ ಪಂದ್ಯಾಟದ ಸಿದ್ಧತೆ ಪೂರ್ತಿಗೊಂಡಿರುವುದಾಗಿ ಬ್ರದರ್ಸ್ ಕ್ಲಬ್‍ನ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಂದು ಅಡ್ಕ ಬ್ರದರ್ಸ್ ಮೈದಾನದಲ್ಲಿ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಸಿಐಎಸ್‍ಎಫ್ ಜಾರ್ಖಂಡ್, ಇಂಡ್ಯನ್ ಪೋಸ್ಟಲ್, ಕೊಚ್ಚಿನ್ ಕಸ್ಟಮ್ಸ್, ಇಂಡ್ಯನ್ ನೇವಿ, ಇನ್‍ಕಂ ಟ್ಯಾಕ್ಸ್ ಕರ್ನಾಟಕ, ಐಒಬಿ ಚೆನ್ನೈ ತಂಡಗಳು ಭಾಗವಹಿಸಲಿವೆ.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಕ್ಲಬ್‍ನ ಅಧ್ಯಕ್ಷ ಬಿಎಂಪಿ ಅಬ್ದುಲ್ಲ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ಹೈದರಾಲಿ ಉಪಸ್ಥಿತರಿರುವರು. ಲಕ್ಷದ್ವೀಪದ ರಾಜ್ಯಪಾಲ ಜಸಿಂತ ಪಣಿಕ್ಕರ್, ಪ್ರಸಾದ್ ಪಣಿಕ್ಕರ್, ಅಬ್ದುಲ್ ಲತೀಫ್ ಉಪ್ಪಳ ಮುಖ್ಯ ಅತಿಥಿಗಳಾಗಿರುವರು. ಇವರಲ್ಲದೆ ವಿವಿಧ ರಂಗಗಳ ಗಣ್ಯರು ಭಾಗವಹಿಸುವರು. ಈ ಬಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಬಿಎಂಪಿ ಅಬ್ದುಲ್ಲ, ಸಂಚಾಲಕ ಯೂಸುಫ್ ಸಿ.ಎ.,ಮಹಮೂದ್, ಕೋಶಾಧಿಕಾರಿ ಹಮೀದ್ ಭಾಗವಹಿಸಿದ್ದರು.