ಬದಿಯಡ್ಕ: ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸನಿಹದಲ್ಲಿರುವ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ನೂತನ ಪಾಕಶಾಲೆ "ಅನಂತಶ್ರೀ" ಯ ಉದ್ಘಾಟನೆ ಗುರುವಾರ ಜರಗಿತು.
ಕೊಡುಗೈದಾನಿ ಬದಿಯಡ್ಕದ ಉದ್ಯಮಿ ಗೋಪಾಲಕೃಷ್ಣ ಪೈ ದೀಪ ಪ್ರಜ್ವಲನೆಗೊಳಿಸಿ ಲೋಕಾರ್ಪಣೆಗೈದರು. ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಧಾರ್ಮಿಕ ಮುಂದಾಳು ಉಮೇಶ್ ನರಿಕಡಪ್ಪು, ಮಹೇಶ್ ವಳಕುಂಜ, ಟ್ರಸ್ಟಿಗಳಾದ ಗೋಪಾಲ ಭಟ್ ಪಿ ಎಸ್ ಪಟ್ಟಾಜೆ, ರಾಮ ಕಾರ್ಮಾರು, ನವೀನ್ ಚಂದ್ರ ಪಿ ಕೆ, ನಿವೃತ್ತ ಮುಖ್ಯೋಪಾಧ್ಯಾಯ ಮಾನ ಮಾಸ್ತರ್ ಕಾರ್ಮಾರು, ಸೇವಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಯುವಕ ವೃಂದ ಹಾಗೂ ಮಹಿಳಾ ವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ರಾಧಾಕೃಷ್ಣ ರೈ ಕಾರ್ಮಾರು ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ಗಣಪತಿ ಹವನ, ಬಲಿವಾಡು ಕೂಟ ಹಾಗೂ ಅನ್ನಸಂತರ್ಪಣೆ ಜರಗಿತು.