ಆಂಧ್ರಪ್ರದೇಶದಲ್ಲಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಸಿಎಂ ಆಗಿದ್ದಾಗ ರಚಿಸಿದ್ದ ವಕ್ಫ್ ಮಂಡಳಿಯನ್ನು ಪ್ರಸ್ತುತ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ಸರ್ಕಾರ ವಿಸರ್ಜನೆ ಮಾಡಿದೆ.
ಈ ಕುರಿತು ಇಂಡಿಯಾ ಟುಡೇ ವೆಬ್‌ಸೈಟ್ ಸೇರಿದಂತೆ ಹಲವು ವಾಹಿನಿಗಳು ವರದಿ ಮಾಡಿವೆ.
2023 ರಿಂದ ಆಂಧ್ರಪ್ರದೇಶ ವಕ್ಫ್ ಮಂಡಳಿ ಯಾವುದೇ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿರಲಿಲ್ಲ. ಇದರ ಬಗ್ಗೆ ದೂರುಗಳೂ ಹೆಚ್ಚಾಗಿದ್ದವು. ಸುನ್ನಿ, ಶಿಯಾ ಮುಸ್ಲಿಂ ಪಂಗಡಗಳಿಗೆ ಸರಿಯಾದ ಪ್ರಾತಿನಿಧ್ಯವನ್ನು ಕಲ್ಪಿಸಿರಲಿಲ್ಲ. ಸದ್ಯದ ವಕ್ಫ್ ಮಂಡಳಿಯನ್ನು ರದ್ದು ಮಾಡಿ ಹೊಸದಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಆಂಧ್ರ ಸರ್ಕಾರದ ಆದೇಶ ಹೇಳಿದೆ.
ಜಗನ್ ಸರ್ಕಾರದಲ್ಲಿ ರಚಿಸಲಾಗಿದ್ದ ವಕ್ಫ್ ಮಂಡಳಿಯ ಮುತುವಲ್ಲಿ ಹಾಗೂ ಸದಸ್ಯರ ವಿರುದ್ಧ ಕೆಲ ವಕೀಲರು ಕಾನೂನು ಹೋರಾಟ ನಡೆಸುತ್ತಿದ್ದರು ಎಂದು ವರದಿ ಹೇಳಿದೆ.