ಕಾಸರಗೋಡು: ಶಿಕ್ಷಕಿಯರ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಪನೇರಿಹೌಸ್ ಅಯಿತ್ತಲ್ ನಿವಾಸಿ ಅಫ್ರೀನಾ(19)ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಆಖಲಿಸಿಕೊಂಡಿದ್ದಾರೆ. ಅಫ್ರೀನಾ ತಾಯಿ ಬುಶ್ರಾ ನೀಡಿದ ದುರಿನನ್ವಯ ಈ ಕೇಸು ದಆಖಲಾಗಿದೆ.
ಅಂಬಲತ್ತರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆಂದು ಶುಕ್ರವಾರ ಬೆಳಗ್ಗೆ ತೆರಳಿದ್ದ ಅಫ್ರೀನಾ ವಾಪಸಾಗಿಲ್ಲ. ಆಕೆಯ ಮೊಬೈಲ್ ಸ್ವಿಚ್‍ಆಫ್ ಆಗಿರುವುದಾಗಿ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಮಧ್ಯೆ ಇವರ ಮನೆಗೆ ಕೆಲಸಕ್ಕೆ ಆಗಮಿಸುತ್ತಿದ್ದ ಜಿನ್‍ಸನ್ ಎಂಬ ಯುವಕನೂ ನಾಪತ್ತೆಯಾಘಿದ್ದು, ಈತನ ಮೊಬ್ಯಲ್ ಕೂಡಾ ಸ್ವಿಚ್‍ಆಫ್ ಆಗಿರುವುದಾಘಿ ಮಾಹಿತಿಯಿದೆ.