ಬದಿಯಡ್ಕ: ಪೆರಡಾಲ ಶ್ರೀಉದನೇಶ್ವರ ದೇವಾಲಯದ ವಾರ್ಷಿಕ ಧನು ಸಂಕ್ರಮಣ ಉತ್ಸವ ಇಂದು ಹಾಗೂ ನಾಳೆ ನಡೆಯಲಿದೆ.
ಇಂದು ಬೆಳಿಗ್ಗೆ 6.30ಕ್ಕೆ ಗಣಪತಿ ಹವನ, 7.30ಕ್ಕೆ ಬೆಳಗಿನ ಪೂಜೆ, 10 ಕ್ಕೆ ಏಕಾದಶ ರುದ್ರಾಭಿಷೇಕ, 11 ಕ್ಕೆ ನವಕಾಭಿಷೇಕ, 12 ಕ್ಕೆ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ,ಶ್ರೀಶಿವಲಿ ಉತ್ಸವ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6.15ಕ್ಕೆ ದೀಪಾರಾಧನೆ, ತಾಯಂಬಕ, 7.30 ಕ್ಕೆ ಶ್ರೀರಂಗಪೂಜೆ, ರಾತ್ರಿ 9 ರಿಂದ ಶ್ರೀದೇವರ ಬಲಿ ಉತ್ಸವ, ಬೆಡಿ ಸೇವೆ, ಸೋಮವಾರ ಬೆಳಿಗ್ಗೆ 7.30ಕ್ಕೆ ಬೆಳಗಿನ ಪೂಜೆ, 10 ರಿಂದ ಶ್ರೀದೇವರ ಬಲಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ ನಡೆಯಲಿದೆ.ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೆಳಿಗ್ಗೆ 9.30 ರಿಂದ ಬದಿಯಡ್ಕ ಯಕ್ಷ ವಿಹಾರಿ ಬಳಗದವರಿಂದ ಹಾಗೂ ಅಪರಾಹ್ನ 2ರಿಂದ ಮಾನ್ಯ ವಿಶ್ವನಾಥ ರೈ ಬಳಗದವರಿಂದ ತಾಳಮದ್ದಳೆ ನಡೆಯಲಿದೆ. ಸಂಜೆ 6.30 ರಿಂದ ವಿದುಷಿಃ ಗೀತಾ ಸಾರಡ್ಕ ಇವರ ಬದಿಯಡ್ಕದ ಶಿಷ್ಯವೃಂದದವರಿಂದ ಶಾಸ್ತ್ರೀಯ ಸಂಗೀತ ಕಛೇರಿ, 7 ರಿಂದ ಸಭಾ ಕಾರ್ಯಕ್ರಮ ಹಾಗೂ ಗೌರವಾರ್ಪಣೆ ನಡೆಯಲಿದೆ. ರಾತ್ರಿ 9 ರಿಂದ ಹಾಸ್ಯನಟ ಪೊಳ್ಳಾಚಿ ಮುತ್ತು ತಂಡದವರಿಂದ ಗಾನ ಮೇಳ ನಡೆಯಲಿದೆ.