ಕುಂಬಳೆ : ಕುಂಬಳೆ ಕುಂಟಂಗೇರಡ್ಕ ನಿವಾಸಿ ಆಟೋಚಾಲಕ ಸತಿಶ್ ಎಂಬವರಿಗೆ ಹಲ್ಲೆನಡೆಸಿದ ಪ್ರಕರಣದ ಆರೋಪಿ ಕೊಯಿಪ್ಪಾಡಿ ನಿವಾಸಿ ಫಾರೂಕ್ ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಚಿತ ಸರ್ವೀಸ್ ಮೂಲಕ ತನ್ನನ್ನು ಕೊಯಿಪ್ಪಾಡಿಯ ಮನೆಗೆ ತಲುಪಿಸುವಂತೆ ಫಾರೂಕ್ ಒತ್ತಾಯಿಸಿದ್ದು, ಇದಕ್ಕೆ ಸತೀಶ್ ಒಪ್ಪದಿದ್ದಾಗ ಹಲ್ಲೆ ನಡೆಸಿರುವುದಾಗಿ ದೂರಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.