ಭೋಪಾಲ್: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಜನಪ್ರಿಯ ಬೈಗಾ ಬುಡಕಟ್ಟು ಕಲಾವಿದೆ, ಪದ್ಮಶ್ರೀ ಪುರಸ್ಕೃತೆ ಜೋಧಇಯಾ ಬಾಯಿ(86) ಅವರು ನಿಧನರಾಗಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಬೈಗಾ ಬುಡಕಟ್ಟು ಕಲೆ ಅಂತರಾಷ್ಟ್ರೀಯ ಮನ್ನಣೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಕಲಾ ಕ್ಷೇತ್ರದಲ್ಲಿ ತಾವು ನೀಡಿದ ವಿಶೇಷ ಕೊಡುಗೆಗೆ 2023 ರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದರು.
ಜೋಧಇಯಾ ಬಾಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್, 'ಬುಡಕಟ್ಟು ಸಂಸ್ಕೃತಿ, ಕಲೆ ಮತ್ತು ಸಂಪ್ರದಾಯ, ಚಿತ್ರಕಲೆಗಳಿಗೆ ಮನ್ನಣೆ ನೀಡಲು ತಮ್ಮ ಇಡಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಅಧ್ಬುತ ಕಲಾವಿದೆಯನ್ನು ಈ ದೇಶ ಕಳೆದುಕೊಂಡಿದೆ' ಎಂದು ಹೇಳಿದ್ದಾರೆ.
ಲೋಧಾ ಗ್ರಾಮದಲ್ಲಿ ಇಂದು (ಸೋಮವಾರ) ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಧರಣೇಂದ್ರ ಕುಮಾರ್ ಜೈನ್ ತಿಳಿಸಿದ್ದಾರೆ.