ತಿರುವನಂತಪುರಂ: ಜೈಲುಗಳು ಕೈದಿಗಳಿಗೆ ಸುರಕ್ಷಿತ ನೆಲೆಯಾಗಬೇಕು ಮತ್ತು ಜೈಲು ಅಧಿಕಾರಿಗಳು ಘನತೆ ಕಾಪಾಡುವ ಮತ್ತು ಕೈದಿಗಳ ಆತ್ಮವಿಶ್ವಾಸ ಹೆಚ್ಚಿಸುವಂತಿರಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ದೈಹಿಕ ಹಿಂಸೆ, ಭಯ, ಆತಂಕ, ಶೋಷಣೆ ಮತ್ತು ಮಾನಸಿಕ ಒತ್ತಡಕ್ಕೆ ಜೈಲಿನೊಳಗೆ ಅವಕಾಶ ಇರಬಾರದು. ಜೈಲಿನಿಂದ ಹೊರಬಂದವರು ಆತ್ಮವಿಶ್ವಾಸದಿಂದ ಬದುಕುವ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಬೇಕು. ಯಾವುದೇ ರೀತಿಯ ತಾರಮ್ಯಕ್ಕೆ ಒಳಗಾಗಬಾರದು ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯ ಕಾರಾಗೃಹ ಸಲಹಾ ಸಮಿತಿಯ ಮೊದಲ ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.
ಹೊಸದಾಗಿ ನಿರ್ಮಿಸುವ ಜೈಲು ಕಟ್ಟಡಗಳು ಹೆಚ್ಚಿನ ಆಧುನಿಕ ಸೌಲಭ್ಯಗಳನ್ನು ಹೊಂದಿರಬೇಕು ಎಂದು ಸೂಚಿಸಲಾಗಿದೆ. ಜೈಲು ಕೈದಿಗಳಿಗೆ ವೈದ್ಯಕೀಯ ಸೌಲಭ್ಯಗಳ ವಿಷಯದಲ್ಲಿ ಹೆಚ್ಚಿನ ಗಮನ ಮತ್ತು ಹಸ್ತಕ್ಷೇಪದ ಅಗತ್ಯವಿದೆ. ಕೈದಿಗಳಿಗೆ