ತಿರುವನಂತಪುರಂ: ರಾಜ್ಯ ಶಾಲಾ ಕಲೋತ್ಸವಕ್ಕೆ ಅಡುಗೆ ಸಿದ್ಧಪಡಿಸಲು ವಸ್ತುಸಂಗ್ರಹ ಉಗ್ರಾಣಕ್ಕೆ ಇಂದು ಚಾಲನೆ ನೀಡಲಾಯಿತು. ಅಡುಗೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಬಿಆರ್‌ಸಿಗಳ ನೇತೃತ್ವದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುತ್ತದೆ.
ತೆಂಗಿನಕಾಯಿ, ಅಕ್ಕಿ, ಸಕ್ಕರೆ, ದ್ವಿದಳ ಧಾನ್ಯಗಳು, ತೆಂಗಿನೆಣ್ಣೆ, ತುಪ್ಪ, ತರಕಾರಿಗಳು, ಕರಿಮೆಣಸು, ಅಡೆ, ರವಾ ಸಹಿತ 40 ಆಹಾರಗಳನ್ನು ಸಂಗ್ರಹಿಸಲಾಗುತ್ತದೆ. ಕಾಟನ್‌ಹಿಲ್ ಶಾಲೆಯಲ್ಲಿ ಸಂಪನ್ಮೂಲ ಸಂಗ್ರಹ ಉಗ್ರಾಣವನ್ನು ಸಚಿವ ವಿ. ಶಿವನ್ ಕುಟ್ಟಿ ಉದ್ಘಾಟಿಸಿದರು. 12 ಬಿಆರ್ ಸಿಗಳ ಸಂಪನ್ಮೂಲಗಳನ್ನು ಜನವರಿ 2ರಂದು ಸಂಜೆ 4 ಗಂಟೆಗೆ ಪುತ್ತರಿಕಂಡಂ ಮೈದಾನದಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ಸಚಿವ ಜಿ.ಆರ್. ಅನಿಲ್ ಸ್ವೀಕರಿಸಲಿದ್ದಾರೆ
ಮೋಹನನ್ ನಂಬೂದಿರಿ ಮತ್ತು ಅವರ ತಂಡ ಈ ಬಾರಿಯೂ ಅಡುಗೆ ತಯಾರಿಸುತ್ತಿದೆ. 100 ಜನರ ತಂಡವು ಪಾಳಿಯಲ್ಲಿ ಆಹಾರವನ್ನು ತಯಾರಿಸುತ್ತದೆ. ಐದು ದಿನಗಳಲ್ಲಿ ಮಧ್ಯಾಹ್ನದ ಊಟ ವಿವಿಧ ಭಕ್ಷ್ಯಭೋಜ್ಯಗಳನ್ನು ಒಳಗೊಂಡಿರುತ್ತದೆ. ಬೆಳಗಿನ ಉಪಾಹಾರವೂ ಪ್ರತಿ ದಿನವೂ ವಿಭಿನ್ನವಾಗಿರುತ್ತದೆ. ರಾತ್ರಿ, ಅನ್ನ ಸಿಹಿ ಪದಾರ್ತ್ಥ ಹೊರತುಪಡಿಸಿ ಇತರ ಮೇಲೋಗರಗಳೊಂದಿಗೆ ಬಡಿಸಲಾಗುತ್ತದೆ. ಒಂದೇ ಬಾರಿಗೆ 350 ಶಿಕ್ಷಕರು ಸೇವೆಗೆ ನೆರವಾಗುವರು. ವಿದ್ಯಾರ್ಥಿಗಳು ಮತ್ತು ಇತರರು ಸಹಕರಿಸುವರು.
ರಾಜ್ಯ ಶಾಲಾ ಕಲೋತ್ಸವ- ಉಗ್ರಾಣ ಮುಹೂರ್ತ ನೆರವೇರಿಸಿದ ಸಚಿವರು
0
ಡಿಸೆಂಬರ್ 31, 2024
Tags