ಢಾಕಾ: ತಮ್ಮ ಅರ್ಜಿಯ ವಿಚಾರಣೆಯನ್ನು ನಿಗದಿತ ದಿನಕ್ಕಿಂತ ಮೊದಲೇ ನಡೆಸುವಂತೆ ಕೋರಿ, ದೇಶದ್ರೋಹ ಪ್ರಕರಣದಡಿ ಬಂಧನದಲ್ಲಿರುವ ಹಿಂದೂ ಮುಖಂಡ ಚಿನ್ಮಯಿ ಕೃಷ್ಣದಾಸ್ ಸಲ್ಲಿಸಿದ್ದ ಅರ್ಜಿಯನ್ನು ಚಟ್ಟೋಗ್ರಾಮ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.
'ಚಿನ್ಮಯಿ ಕೃಷ್ಣದಾಸ್ ಪರ ವಕೀಲರು ಈ ನಿವೇದನೆ ಮಾಡುವುದಕ್ಕಾಗಿ 'ಪವರ್ ಆಪ್ ಅಟಾರ್ನಿ' ಹೊಂದಿಲ್ಲ.
ಹೀಗಾಗಿ ಈಗಾಗಲೇ ನಿಗದಿ ಮಾಡಿರುವಂತೆ ಜ.2ರಂದೇ ಅರ್ಜಿ ವಿಚಾರಣೆ ನಡೆಸಲಾಗುವುದು' ಎಂದು ಮೆಟ್ರೊಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಸೈಫುಲ್ ಇಸ್ಲಾಂ ಹೇಳಿದರು.
ವಕೀಲ ರವೀಂದ್ರ ಘೋಷ್, ದಾಸ್ ಪರ ಹಾಜರಿದ್ದರು.