ಉಪ್ಪಳ :ಉಪ್ಪಳ ಹಿದಾಯತ್‍ನಗರ ನಿವಾಸಿ ವಿದೇಶದಲ್ಲಿ ಉದ್ಯೋಗಿಯಾಗಿರುವ ಮೊಯ್ದೀನ್‍ಕುಞÂ ಎಂಬವರ ಮನೆ ಬಾಗಿಲು ಒಡೆದು ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿದ್ದಾರೆ. ಮೊಯ್ದೀನ್‍ಕುಞÂ ಅವರ ಪತ್ನಿ ಅವ್ವಾಬಿ ಮನೆಗೆ ಬೀಗಹಾಕಿ ಸಂಬಂಧಿಕರಲ್ಲಿಗೆ ತೆರಳಿದ್ದು, ವಆಪಸಾಗುವಾಗ ಮನೆಬಾಗಿಲು ಒಡೆದ ಸ್ಥಿತಿಯಲ್ಲಿ ಕಂಡುಬಂದಿತ್ತು. ಮನೆಯೊಳಗೆ ತೆರಳಿ ತಪಾಸಣೆ ನಡೆಸಿದಾಗ ಚಿನ್ನಾಭರಣ ಕಳವಾಗಿತ್ತು. ಪ್ರಕರಣದ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಂಡದೊಂದಗೆ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದರು.