ಕೊಚ್ಚಿ: ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗವು ತ್ರಿಪುಣಿತುರ ಪೂರ್ಣತ್ರಯೀಶ ದೇವಸ್ಥಾನದ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಮಾರ್ಗಸೂಚಿಗಳನ್ನು ಅನುಸರಿಸದ ಆರೋಪದ ಮೇಲೆ ಪ್ರಕರಣ ದಾಖಲಿಸಿದೆ. ದೇಗುಲದಲ್ಲಿ ವೃಶ್ಚಿಕೋತ್ಸವದ ವೇಳೆ ಆನೆಗಳ ನಡುವೆ ಮೂರು ಮೀಟರ್ ಅಂತರ ಇರದಿದ್ದನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿದ್ದು, ಜನ ಮತ್ತು ಆನೆಗಳನ್ನು ಎಂಟು ಮೀಟರ್ ಅಂತರ ಪಾಲಿಸಿಲ್ಲ ಎಂದು ಉಲ್ಲೇಖಿಸಲಾಗಿದೆ.
ದೇವಸ್ಥಾನದಲ್ಲಿ ಅಗ್ನಿಕುಂಡ ಮತ್ತು ಆನೆಗಳಿಂದ 5 ಮೀಟರ್ ಅಂತರ ಕಾಯ್ದುಕೊಳ್ಳುವ ಮಾರ್ಗಸೂಚಿಯನ್ನು ಉಲ್ಲಂಘಿಸಲಾಗಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆ ಗಮನಸೆಳೆದಿದೆ.
ಇದೇ ವೇಳೆ ರಾತ್ರಿ ಮಳೆ ಸುರಿದಿದ್ದರಿಂದ ಆನೆಗಳನ್ನು ಜೊತೆಜೊತೆಗೆ ನಿಲ್ಲಿಸಬೇಕಾಯಿತು ಎಂದು ದೇವಸ್ಥಾನದ ಅಧಿಕಾರಿಗಳು ವಿವರಿಸಿದರು.
ವೃಶ್ಚಿಕೋತ್ಸವದಲ್ಲಿ 15 ಆನೆಗಳನ್ನು ಬಳಸಲಾಗಿತ್ತು. ಹೈಕೋರ್ಟ್ ನಿಯಂತ್ರಣದಿಂದ ಮುಕ್ತಿ ಕೋರಿ ದೇವಸ್ವಂ ಮಂಡಳಿ ನ್ಯಾಯಾಲಯದ ಮೆಟ್ಟಿಲೇರಿದ್ದರೂ ಪರಿಹಾರ ಸಿಕ್ಕಿರಲಿಲ್ಲ.