ಕಾಸರಗೋಡು: ಪೆಂಗಲ್ ಚಂಡಮಾರುತದ ಪರಿಣಾಮ ಕಾಸರಗೋಡು ಜಿಲ್ಲಾಧ್ಯಂತ ಮಂಗಳವಾರ ಮಧ್ಯಾಹ್ನ ವರೆಗೂ ಬಿರುಸಿನ ಮಳೆಯಾಗಿದ್ದು, ನಂತರ ಮಳೆ ಪ್ರಮಾಣ ತಗ್ಗಿದೆ. ಸೋಮವಾರ ಮಧ್ಯಾಹ್ನದಿಂದ ಸುರಿದ ಬಿರುಸಿನ ಮಳೆಗೆ ತಗ್ಗು ಪ್ರದೇಶದಲ್ಲಿ ಮಳೆನೀರು ತುಂಬಿಕೊಂಡು ಜನರು ಸಮಸ್ಯೆ ಎದುರಿಸುವಂತಾಗಿತ್ತು. ರೆಡ್ ಅಲರ್ಟ್ ಘೊಷೊಸೊದ ಹಿನ್ನೆಲೆಯಲ್ಲಿ ವೃತ್ತಿಪರ ಕಾಲೇಜುಗಳು ಸೇರಿದಂತೆ ಕಸರಗೋಡು ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ರಜೆ ಘೋಷಿಸಿದ್ದರು.
ಕಾಸರಗೋಡು ಜಿಲ್ಲೆಯ ತಲಪ್ಪಾಡಿಯಿಂದ ನೀಲೇಶ್ವರ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ ನಡೆಯುವ ಪ್ರದೇಶ ಸಂಪೂರ್ಣ ನೀರಿನಿಂದಾವೃತವಾಘಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟಗಿತ್ತು. ಬಹುತೇಕ ಕಡೆ ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸಿರುವುದರಿಂದ ಮಳೆನೀರು ಸುಗಮ ಸಂಚಾರಕ್ಕೆ ಅಡಚಣೆಯುಂಟಾಗಿ ರಸ್ತೆ ಪೂರ್ತಿ ನೀರಿನಿಂದಾವೃತವಾಗಿತ್ತು.
ಕಾಸರಗೋಡು ಹೊಸ ಬಸ್‍ನಿಲ್ದಾಣ ವಠಾರ, ಉಪ್ಪಳ, ನಯಾಬಜಾರ್, ಮಂಜೇಶ್ವರ ಮುಂತಾದೆಡೆ ರಸ್ತೆನಿರ್ಮಾಣ ಸ್ಥಳದಿಂದ ಮಳೆನೀರು ಮನೆಗಳಿಗೆ ಹಾಗೂ ವ್ಯಾಪಾರಿ ಸಂಸ್ಥೆಗಳಿಗೆ ನುಗ್ಗಿ ಹಾನಿ ಸಂಭವಿಸಿದೆ. ಸರ್ವೀಸ್ ರಸ್ತೆ, ಅಂಡರ್ ಪಾಸ್‍ಗಳಲ್ಲಿ ಮಳೆನೀರು ತುಂಬಿಕೊಮಡು ವಾಹನ ಸಂಚಾರ ದುಸ್ತರವಾಗಿತ್ತು. ಹೊಸಂಗಡಿಯಲ್ಲಿ ಮಳೆನೀರು ತುಂಬಿಕೊಂಡ ಹಿನ್ನೆಲೆಯಲ್ಲಿ ಈ ಪ್ರದೇಶದ 15ಕುಟುಂಬಗಳನ್ನು ಅಗ್ನಿಶಾಮಕ ದಳದ ಸಹಾಐದಿಂದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಯಿತು.
ಸಿಡಿಲ ಆಘಾತ-ಹಾನಿ:
ಸಿಡಿಲಿನ ಆಘಾತದಿಂದ ಮಂಜೇಶ್ವರ ಹೊಸಂಗಡಿ ಮಳ್‍ಹರ್ ಮುಂಭಾಗದಲ್ಲಿರುವ ಮಹಮ್ಮದ್ ಬಿ.ಎಂ ಅವರ ಮನೆಗೆ ಹಾನಿಯುಂಟಾಗಿದೆ. ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಫ್ರಿಡ್ಜ್, ವಾಶಿಂಗ್ ಮಿಶನ್, ಫ್ಯಾನ್ ಸೇರಿದಂತೆ ಇಲೆಕ್ಟ್ರಾನಿಕ್ ಉಪಕರಣಗಳು ಹಾನಿಗೀಡಾಗಿದೆ. ಒಂದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
(ಹೊಸಂಗಡಿ ಪ್ರದೇಶದಲ್ಲಿ ನೀರಿನ ಮಧ್ಯೆ ಸಿಲುಕಿಕೊಂಡವರನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದರು.)