ಕಾಸರಗೋಡು: ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಸೇರಿದ ಭೂರಹಿತ ಕುಟುಂಬಗಳಿಗೆ 'ಲ್ಯಾಂಡ್ ಬ್ಯಾಂಕ್ ಯೋಜನೆ'ಯನ್ವಯ ಕಾಸರಗೋಡು, ಮಂಜೇಶ್ವರ, ಹೊಸದುರ್ಗ ತಾಲೂಕುಗಳಲ್ಲಿ ಜಾಗ ಮಾರಾಟ ಮಾಡಲು ಇಚ್ಛಿಸುವ ಭೂ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾದಿಕಾರಿ ಹಾಗೂ ರಾಜ್ಯ ಬುಡಕಟ್ಟು ಪುನರ್ವಸತಿ ಅಭಿವೃದ್ಧಿ ಮಿಷನ್ (ಟಿಆರ್‍ಡಿಎಂ)ಜಿಲ್ಲಾ ಅಧ್ಯಕ್ಷರೂ ಆಗಿರುವ ಕೆ. ಇನ್ಬಾಶೇಖರ್ ಅವರ ಮೂಲಕ ಭೂ ಬ್ಯಾಂಕ್ ಯೋಜನೆಯನ್ವಯ ಯಾವುದೇ ಕಾನೂನು ತೊಡಕುಗಳಿಲ್ಲದ, ಕುಡಿಯುವ ನೀರು ಸರಬರಾಜು, ರಸ್ತೆ, ವಿದ್ಯುತ್ ಮುಂತಾದ ಸವಲತ್ತು ಒಳಗೊಂಡ ವಾಸಯೋಗ್ಯ ಭೂಮಿ ಮಾರಾಟಕ್ಕೆ ತಯಾರಿರುವ ಬಗ್ಗೆ ಭೂಮಿಯ ಮಾಲೀಕರು ಸಮ್ಮತಿ ಪತ್ರ ಸಲ್ಲಿಸಬೇಕು.
ಒಂದು ಎಕರೆಗಿಂತ ಕಡಿಮೆಯಿಲ್ಲದ ಭೂಮಿಯ ಮಾಲೀಕರು ಭೂಮಿ ಮಾರಾಟಕ್ಕೆ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಜಮೀನಿನ ಗುಣಮಟ್ಟವನ್ನು ಆಯ್ಕೆ ಮಾಡಲು ಮತ್ತು ನಿರ್ಧರಿಸಲು,ಇದರ ಆಧಾರದ ಮೇಲೆ ಅರ್ಜಿಗಳನ್ನು ಪರಿಗಣಿಸಲು ಮತ್ತು ತಿರಸ್ಕರಿಸಲು ಜಿಲ್ಲಾಧಿಕಾರಿ ಅಧಿಕಾರ ಹೊಂದಿರುತ್ತಾರೆ. ಭೂಮಿ ಖರೀದಿಗೆ ಸಂಬಂಧಿಸಿದ ವಿವಾದಗಳಲ್ಲಿ ಟಿಅರ್‍ಡಿಎಂ ಜಿಲ್ಲಾ ಮಿಷನ್‍ನ ನಿರ್ಧಾರವು ಸಹ ಅಂತಿಮವಾಗಿರುತ್ತದೆ. ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 2025ರ ಜ. 6 ಕೊನೆಯ ದಿನಾಂಕವಾಗಿರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994-255466)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.