ಕಾಸರಗೋಡು: ಪೈವಳಿಕೆ ಸಾದತ್ ಮಖಾಂ ಉರುಸ್ ಡಿಸೆಂಬರ್ 4 ರಿಂದ 8 ರವರೆಗೆ ಪೈವಳಿಕೆ ಮರ್ಹೂಮ್ ಸೈಯದ್ ಅಬ್ದುಲ್ಲಾ ತಂಙಳ್ ನಗರದಲ್ಲಿ ನಡೆಯಲಿದೆ.
ಯೆಮೆನ್‍ನ ಹಾಲ್ಮೌತ್‍ನಿಂದ ಕೇರಳಕ್ಕೆ ದಿನಿ ಪ್ರಚಾರಾರ್ಥ ಆಗಮಿಸಿದ ಸಾದತ್ ಕುಟುಂಬದ ಕೊಂಡಿಯಾದ ಸೈಯದ್ ಅಬೂಬಕರ್ ಜಲಾಲುದ್ದೀನ್ ಅಲ್ ಬುಖಾರಿ ಉದ್ಯಾವರ್(ಕಾರ್ತೋರ್) ಅವರ ನಾಲ್ಕನೇ ತಲೆಮಾರಿನ ಪೈವಳಿಕೆ ಸಾದತಿ ಅವರ ಸ್ಮರಣಾರ್ಥ ಮೂರು ವರ್ಷಕ್ಕೊಮ್ಮೆ ಉರುಸ್ ನಡೆಯುತ್ತದೆ.
ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್, ಸಂಸದ ರಾಜ್ ಮೋಹನ್ ಉನ್ಣಿತ್ತಾನ್, ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು ಮೊದಲಾದವರು ಭಾಗವಹಿಸಲಿರುವುದಾಗಿ ಸಮಿತಿಯ ಪ್ರಧಾನ ಸಂಚಾಲಕ ಸಯ್ಯದ್ ನುಹ್‍ಮಾನ್ ತZಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿ. 4ರಂದು ಬೆಳಗ್ಗೆ 10ರಿಂದ ಮಖಾಂ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಸೈಯದ್ ಕೋಯ ಕುಟ್ಟಿ ತಂಗಳು ಅಲ್ ಬುಖಾರಿ ಉಪ್ಪಳ ಝಿಯಾರತ್ ನೇತೃತ್ವ ವಹಿಸಲಿದ್ದಾರೆ. ನಂತರ ಸೈಯದ್ ಪೂಕೋಯ ತಂಙಳ್ ಅಲ್ ಬುಖಾರಿ ಕಯ್ಯಾರ್ ಧ್ವಜಾರೋಹಣ ನಡೆಸುವರು.
ರಾತ್ರಿ 8ಕ್ಕೆ ಸಯ್ಯದ್ ಎನ್.ಪಿ.ಎಂ ಜೈನುಲ್ ಆಬಿದೀನ್ ತಙಳ್ ಅಲ್ ಬುಖಾರಿ ಉದ್ಘಾಟಿಸುವರು. ಸಯ್ಯದ್ ಮುಹಮ್ಮದ್ ಮದನಿ ತಂಙಳ್ ಮೊಗ್ರಾಲ್ ಅಧ್ಯಕ್ಷತೆ ವಹಿಸುವರು.
10ರಂದು ಬೆಳಗ್ಗೆ 10ಕ್ಕೆ ಪ್ರಮುಖ ಸಾದತ್ ಸದಸ್ಯರು, ವಿದ್ವಾಂಸರು ಮತ್ತು ಮುಖಂಡರ ಉಪಸ್ಥಿತಿಯಲ್ಲಿ ಮೌಲಿದ್ ಪಾರಾಯಣ ನಡೆಯಲಿದೆ. ಸೈಯದ್ ಕೆ.ಎಸ್.ಜಾಫರ್ ಸ್ವಾದಿಕ್ ತಙಳ್ ಕುಂಬೋಳ್ ನೇತೃತ್ವ ವಹಿಸುವರು. ನಂತರ ಸ್ನೇಹ ಸಂಗಮ ಹಾಗೂ ತುಪ್ಪದ ಅನ್ನ ವಿತರಣೆ ನಡೆಯುವುದು ಎಂದು ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಮಜೀದ್ ದಾರಿಮಿ, ಅಜೀಜ್ ಮರಿಕೆ, ಕೋಶಾಧಿಕಾರಿ ಮೊಯ್ದುಹಾಜಿ ಸಿಟಿ ಗೋಲ್ಡ್, ಸಂಚಾಲಕ ಅಜೀಜ್ ಉಪಸ್ಥಿತರಿದ್ದರು.