ಮಂಜೇಶ್ವರ: ಪುರಾತನ ಇತಿಹಾಸವಿರುವ ಕುಂಜತ್ತೂರು ಜುಮಾ ಮಸೀದಿಯ ಅಧಿನದಲ್ಲಿರುವ ಮಹದನುಲ್ ಉಲೂಂ ಮದ್ರಸದ ಸುವರ್ಣ ಮಹೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ನಾಲ್ಕು ದಿವಸಗಳ ಧಾರ್ಮಿಕ ಸಭಾ ಕಾರ್ಯಕ್ರಮ ಬುಧವಾರ ಉದ್ಘಾಟನೆಗೊಂಡಿತು. ಬೆಳಿಗ್ಗೆ ಮಸೀದಿ ಅಧ್ಯಕ್ಷ ಸಯ್ಯದ್ ಚಕ್ಕೂರ್ ರವರು ಧ್ವಜಾರೋಹಣಗೈದು ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿದರು.
ಮಸೀದಿ ಅಧ್ಯಕ್ಷ ಸಯ್ಯದ್ ಚಕ್ಕೂರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮಂಜೇಶ್ವರ ಸಂಯುಕ್ತ ಜಮಾಹತ್ ಅಧ್ಯಕ್ಷ ಸಯ್ಯದ್ ಅತ್ತಾವುಲ್ಲ ತಂಙಳ್ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉಪಸ್ಥಿತರಿದ್ದರು. ಬಳಿಕ ಹಳೆ ವಿದ್ಯಾರ್ಥಿ ಸಂಘದ ಲಾಂಛನವನ್ನು ಶಾಸಕರು ಅನಾವರಣಗೊಳಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಡಾ. ಕೆ. ಎ ಖಾದರ್, ಮೊಯಿದಿನ್ ಕುಂಞ, ಮೊಯಿದಿನ್ ಪ್ರಿಯ, ಉಸ್ಮಾನ್ ಕುಂಜತ್ತೂರು, ಎಸ್ ಕೆ ಹನೀಫ್, ಬಾವ ಕೆ ಕೆ, ಅದ್ದು ಹಾಜಿ, ಅಬೂಬಕ್ಕರ್ ಭಾವ, ನಿಝಾಂ ಎಂ ಎ ಕೆ, ಕುಂಞ ಮೋನು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಬಳಿಕ ವೇದಿಕೆಯಲ್ಲಿ ಸುಬೈರ್ ಮಾಸ್ತರ್ ತೋಟಕ್ಕಲ್ ಹಾಗೂ ತಂಡದಿಂದ ಕಥಾ ಪ್ರಸಂಗ ನಡೆಯಿತು. ಮಸೀದಿ ಖತೀಬ್ ಹಾಶಿರ್ ಹಾಮಿದ್ ಸ್ವಾಗತಿಸಿ,ವಂದಿಸಿದರು. ಶನಿವಾರದಂದು ಸಮಾರಂಭ ಸಮಾಪ್ತಿಗೊಳ್ಳಲಿದೆ.