HEALTH TIPS

ಸಹಭಾಗಿತ್ವ ಪಿಂಚಣಿ ಹಿಂಪಡೆಯಬೇಕು-ಕೆಪಿಎಸ್‍ಟಿಎ ವತಿಯಿಂದ ಡಿಡಿಇ ಕಚೇರಿ ಎದುರು ಧರಣಿ

ಕಾಸರಗೋಡು: ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಸಹಭಾಗಿತ್ವ ಪಿಂಚಣಿ ಯೋಜನೆಯನ್ನು ಅರಬ್ಬಿ ಸಮುದ್ರಕ್ಕೆ ಎಸೆಯಲಾಗುವುದು ಎಂಬುದಾಗಿ ಎಡರಂಗ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲು ಇಂದಿನ ಸರ್ಕಾರ ಮುಂದಾಗಬೇಕು ಎಂಬುದಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ(ಡಿಸಿಸಿ)ಅಧ್ಯಕ್ಷ ಪಿ.ಎ.ಫೈಸಲ್ ಹೇಳಿದರು. 


ಅವರು ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆಪಿಎಸ್‍ಟಿಎ)ವತಿಯಿಂದ ಜಿಲ್ಲಾ ಶಿಕ್ಷಣ ಉಪನಿರ್ದೇಶಕ(ಡಿ.ಡಿ.ಇ)ರ ಕಛೇರಿ ಎದುರು ನಡೆದ ಪ್ರತಿಭಟನಾ ಧರಣಿ ಉದ್ಘಾಟಿಸಿ ಮಾತನಾಡಿದರು.  ಅನುದಾನಿತ ಶಾಲಾ ಶಿಕ್ಷಕರಿಗೆ ಹಾಗೂ ಆಡಳಿತ ಮಂಡಳಿಗೆ ಧಕ್ಕೆ ತರುವ ನೀತಿಗಳನ್ನು ಹಿಂಪಡೆಯಬೇಕು ಹಾಗೂ ಶಿಕ್ಷಕರನ್ನು ದಿನಗೂಲಿ ನೌಕರರನ್ನಾಗಿ ಮಾಡುವ ಆದೇಶವನ್ನು  ಹಿಂಪಡೆಯಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು. ಶಾಸನಬದ್ಧ ಪಿಂಚಣಿ ಮರುಸ್ಥಾಪನೆ, ಬಾಕಿಯಿರುವ ಎಲ್ಲ ಸವಲತ್ತು ತಕ್ಷಣ ಬಿಡುಗಡೆ ಮಾಡಬೇಕು, ವೇತನ ಪರಿಷ್ಕರಣೆ ಆಯೋಗ ನೇಮಕಗೊಳಿಸಬೇಕು, ಆರೋಗ್ಯ ರಕ್ಷಣೆಯ ಸಂಪೂರ್ಣ ಸುರಕ್ಷತೆ ಒದಗಿಸಬೇಕು, ಖಾದರ್ ಸಮಿತಿ ವರದಿ ತಿರಸ್ಕರಿಸಬೇಕು ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಕರ ಸೇವಾ ವೇತನ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಧರಣಿ ಆಯೋಜಿಸಲಾಗಿತ್ತು.  

ಧರಣಿಗೆ ಪೂರ್ವಭಾವಿಯಾಗಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕೆಪಿಎಸ್‍ಟಿಎ ಕಂದಾಯ ಜಿಲ್ಲಾಧ್ಯಕ್ಷ ಕೆ.ವಿ. ವಾಸುದೇವನ್ ನಂಬೂದಿರಿ  ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ. ಶಶಿಧರನ್ ಪ್ರಧಾನ ಭಾಷಣ ಮಾಡಿದರು. ಕೆ. ಅನಿಲಕುಮಾರ್, ಪ್ರಶಾಂತ್ ಕಾನತ್ತೂರು, ಕೆ. ಶ್ರೀನಿವಾಸನ್, ಅಶೋಕನ್ ಕೋಡೋತ್, ಯೂಸುಫ್ ಕೊಟ್ಯಾಡಿ, ಸ್ವಪ್ನಾ ಜಾರ್ಜ್ ಉಪಸ್ಥಿತರಿದ್ದರು.  ಪ್ರಧಾನ ಕಾರ್ಯದರ್ಶಿಪಿ.ಟಿ. ಬೆನ್ನಿ ಸ್ವಾಗತಿಸಿದರು. ಕೋಶಾಧಿಕಾರಿ ಜೋಮಿ ಟಿ. ಜೋಸ್ ವಂದಿಸಿದರು. ಜಿಲ್ಲಾ ಅಧಿಕಾರಿಗಳಾದ ಎ. ಜಯದೇವನ್, ಸಿ.ಎಂ. ವರ್ಗೀಸ್, ಪಿ. ಶ್ರೀಜಾ, ಪಿ. ಜಲಜಾಕ್ಷಿ, ಕೆ. ಗೋಪಾಲಕೃಷ್ಣ, ಟಿ. ರಾಜೇಶ್ ಕುಮಾರ್, ಕೆ.ವಿ. ಜನಾರ್ದನನ್, ಎಂ.ಕೆ. ಪ್ರಿಯಾ ವಿಮಲ್ ಅಡಿಯೋಡಿ ಮೊದಲದವರು ನೇತೃತ್ವ ವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries