HEALTH TIPS

ಅನಗತ್ಯ ಕರೆಗಳಿಂದ ಕಿರಿ ಕಿರಿ ಆಗಿದೆಯಾ?..ಹಾಗಿದ್ರೆ, ಕೂಡಲೇ ಹೀಗೆ ಮಾಡಿ!

 ಮೊಬೈಲ್‌ ಅಗತ್ಯ ಡಿವೈಸ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕೆಲವೊಮ್ಮೆ ಮೊಬೈಲ್‌ಗೆ ಬರುವ ಅನಗತ್ಯ ಸ್ಪ್ಯಾಮ್ (spam calls) ವಾಯಿಸ್‌ ಕರೆಗಳು ಹಾಗೂ ಎಸ್‌ಎಮ್‌ಎಸ್‌/ ಮೆಸೆಜ್‌ಗಳು ಬಳಕೆದಾರರಿಗೆ ಕಿರಿ ಕಿರಿ ಉಂಟು ಮಾಡುತ್ತವೆ. ಹೀಗಾಗಿ ಬಹುತೇಕ ಎಲ್ಲರೂ ಸ್ಪ್ಯಾಮ್‌ ಕರೆಗಳನ್ನು ಬ್ಲಾಕ್‌ ಮಾಡಲು ಮುಂದಾಗುತ್ತಾರೆ. ಇನ್ನು ಜಿಯೋ ಬಳಕೆದಾರರಿಗೆ ಸ್ಪ್ಯಾಮ್‌ ಕರೆ ನಿರ್ಬಂಧಿಸುವುದು ಈಗ ತುಂಬ ಸುಲಭ ಆಗಿದೆ.

ಹೌದು, ಜಿಯೋ ಸಂಸ್ಥೆಯು ತನ್ನ ಮೈ ಜಿಯೋ (MyJio) ಆಪ್‌ ಅನ್ನು ನವೀಕರಣ ಮಾಡಿದ್ದು, ಕೆಲವೊಂದು ನೂತನ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಸ್ಪ್ಯಾಮ್ ಕರೆ ಹಾಗೂ ಮೆಸೆಜ್‌ ಬ್ಲಾಕ್‌ ಮಾಡುವ ಆಯ್ಕೆಯು ಲಭ್ಯ ಮಾಡಿದೆ. ಹೀಗಾಗಿ ಜಿಯೋ ಬಳಕೆದಾರರು ಅಪ್‌ಡೇಟ್‌ ಆವೃತ್ತಿಯ ಮೈ ಜಿಯೋ ಆಪ್‌ ಮೂಲಕ ಸುಲಭವಾಗಿ ಸ್ಲ್ಯಾಮ್‌ ಕರೆಗಳನ್ನು (spam calls) ನಿರ್ಬಂಧ ಮಾಡಬಹುದು.

ಅಂದಹಾಗೆ ಬಳಕೆದಾರರು ಎಲ್ಲಾ ಪ್ರಮೋಷನಲ್‌ ಕಂಟೆಂಟ್‌ ಅನ್ನು ನಿರ್ಬಂಧಿಸಲು ಅಥವಾ ನಿರ್ದಿಷ್ಟ ರೀತಿಯ ಸಂವಹನವನ್ನು ಅನುಮತಿಸಲು ಅಥವಾ ಬ್ಲಾಕ್‌ ಮಾಡಲು ಸೆಟ್ಟಿಂಗ್‌ನಲ್ಲಿ ಆಯ್ಕೆ ಸೆಟ್‌ ಮಾಡಬಹುದು. ಹಾಗಾದರೇ ಜಿಯೋ ಬಳಕೆದಾರರು ಅನಗತ್ಯ ಕರೆಗಳ ಹಾವಳಿ ತಪ್ಪಿಸಲು ಯಾವ ಕ್ರಮ ಅನುಸರಿಸಬೇಕು ಎನ್ನುವುದರ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.


ಸ್ಪ್ಯಾಮ್‌ ಕರೆ ಬ್ಲಾಕ್‌ ಮಾಡಲು - ಮೈ ಜಿಯೋ ಆಪ್‌ನಲ್ಲಿ ಹೀಗೆ ಮಾಡಿ

* ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ಫೋನ್‌ನಲ್ಲಿ ಮೈ ಜಿಯೋ ಆಪ್‌ ತೆರೆಯಿರಿ. ಆಪ್‌ ಇಲ್ಲದಿದ್ದರೆ ಇನ್‌ಸ್ಟಾಲ್‌ ಮಾಡಿಕೊಳ್ಳಿ.
* ಆಪ್‌ನ ಮೆನುವಿನಲ್ಲಿ ಮೋರ್/ More ಆಯ್ಕೆ ಅನ್ನು ಸೆಲೆಕ್ಟ್ ಮಾಡಿರಿ.
* ಅನಗತ್ಯ ಸಂವಹನವನ್ನು ನಿರ್ಬಂಧಿಸಲು ಅಡಚಣೆ ಮಾಡಬೇಡಿ (DND) ಆಯ್ಕೆ ಅನ್ನು ಸೆಲೆಕ್ಟ್‌ ಮಾಡಿ.
* ಆ ಬಳಿಕ Full Block ಅಥವಾ Promotional Communication Block ಆಯ್ಕೆಗಳನ್ನು ಟ್ಯಾಪ್‌ ಮಾಡಿರಿ.
* ಬಳಕೆದಾರರು ತಮ್ಮ ಆದ್ಯತೆಗಳ ಅನುಗುಣವಾಗಿ ನಿರ್ದಿಷ್ಟ ಮೆಸೆಜ್‌ಗಳು ಹಾಗೂ ಕರೆಗಳನ್ನು ಅನುಮತಿಸಲು ಅಥವಾ ಬ್ಲಾಕ್‌ ಮಾಡಲು ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡುವ ಆಯ್ಕೆ ಸಹ ಇದೆ.

ಜಿಯೋ ಸಂಸ್ಥೆಯ ಈ ಸೇವೆಯು ಸ್ಲ್ಯಾಪ್‌ ಕರೆ (spam calls) ಹಾಗೂ ಎಸ್‌ಎಮ್‌ಎಸ್‌ಗಳಿಂದ ( SMS ) ಸುರಕ್ಷೆ ಒದಗಿಸುವುದಲ್ಲದೇ, ಇದರೊಂದಿಗೆ, ಫಿಶಿಂಗ್ ಕರೆಗಳಿಂದ ಹಾಗೂ ಮೋಸದ ಪ್ರಯತ್ನಗಳಿಂದ ಸುರಕ್ಷತೆ ನೀಡಲು ಸಹಕಾರಿ ಎನಿಸುತ್ತದೆ.

ಹಾಗೆಯೇ ಜಿಯೋ ಟೆಲಿಕಾಂ ಕೆಲವು ಅತ್ಯುತ್ತಮ ಪ್ಲ್ಯಾನ್‌ಗಳ ಆಯ್ಕೆ ಒಳಗೊಂಡಿದ್ದು, ಗ್ರಾಹಕರ ಗಮನ ಸೆಳದಿದೆ. ಆ ಪೈಕಿ ಜಿಯೋ 999ರೂ. ಗಳ ಯೋಜನೆ ದೀರ್ಘಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 98 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದ್ದು, ಅಲ್ಲದೇ ಇದರ ಜೊತೆಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಸಹ ಸಿಗಲಿದೆ. ಜೊತೆಗೆ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯ ಆಗಲಿದೆ.

ಜಿಯೋ ಸಂಸ್ಥೆಯ 859 ರೂ. ಗಳ ರೀಚಾರ್ಜ್‌ ಯೋಜನೆಯು ಕೂಡಾ ದೀರ್ಘಾವಧಿಯ ಪ್ರೀಪೇಯ್ಡ್‌ ಪ್ಲ್ಯಾನ್‌ ಆಗಿದ್ದು, ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಸಹ ದೊರೆಯುತ್ತದೆ. ಹಾಗೆಯೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries