ಮಂಜೇಶ್ವರ: ಕಲ್ಲಚ್ಚು ಪ್ರಕಾಶನ ಮಂಗಳೂರು ಹಾಗೂ ರಂಗಚಿನ್ನಾರಿ ಕಾಸರಗೋಡು ಇವುಗಳ ಜಂಟಿ ಆಶ್ರಯದಲ್ಲಿ ಶಿಕ್ಷಕ, ಸಾಹಿತಿ ಗಣೇಶ್ ಪ್ರಸಾದ್ ಮಂಜೇಶ್ವರ ಇವರ ಕಥಾ ಸಂಕಲನ 'ಚಿಲ್ಲಾ' ಕೃತಿ ಬಿಡುಗಡೆ ಸಮಾರಂಭ ಡಿ. 22 ಭಾನುವಾರ ಅಪರಾಹ್ನ 2:30 ಕ್ಕೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಭವನ ಗಿಳಿವಿಂಡುವಿನಲ್ಲಿ ನಡೆಯಲಿದೆ.
ಹಿರಿಯ ರಂಗಕರ್ಮಿ ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಪುಸ್ತಕ ಬಿಡುಗಡೆಗೊಳಿಸುವರು. ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ವಿಕ್ರಂ ಕಾಂತಿಕೆರೆ ಕೃತಿಯ ಬಗ್ಗೆ ಮಾತನಾಡುವರು. ಲೇಖಕರಾದ ಪ್ರೊ.ಪಿ. ಎನ್.ಮೂಡಿತ್ತಾಯ, ಮಹೇಶ ಆರ್ ನಾಯಕ್, ಡಾ.ಯು. ಮಹೇಶ್ವರಿ, ಪ್ರಭಾ ನಾಯಕ್, ದಿವಾಕರ ಬಲ್ಲಾಳ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಮೊದಲಾದವರು ಉಪಸ್ಥಿತರಿರುವರು.