HEALTH TIPS

ಉತ್ತರ ಪ್ರದೇಶ: ಮತ್ತೊಂದು ಮಸೀದಿ ವಿರುದ್ಧ ಅರ್ಜಿ

ಲಖನೌ: ಸಂಭಲ್‌ ಜಿಲ್ಲೆಯ ಚಂದೌಸಿಯಲ್ಲಿನ ಶಾಹಿ ಜಾಮಾ ಮಸೀದಿಯ ಬಳಿಕ ಉತ್ತರ ಪ್ರದೇಶದ ಬದಾಂಯೂ ಜಿಲ್ಲೆಯ ಮಸೀದಿಯೊಂದು ಈಗ ಕಾನೂನು ಹೋರಾಟಕ್ಕೆ ಸಿಲುಕಿದೆ. 

ಮುಸ್ಲಿಂ ದೊರೆಗಳು ಶಿವ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎಂದು ಪ್ರತಿಪಾದಿಸಿ, ಅದರ ಮಾಲೀಕತ್ವವನ್ನು ಕೋರಿ ಹಿಂದೂ ಮಹಾಸಭಾ ಸಂಘಟನೆಯು ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಅಮಿತ್‌ ಕುಮಾರ್‌ ಅವರು ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದರು.

ಜಾಮಾ ಮಸೀದಿ ಇಂತೆಜಾಮಿಯಾ ಸಮಿತಿಯ ವಕೀಲ ಅನ್ವರ್‌ ಆಲಂ ಅವರು ಮಸೀದಿಯ ಪರವಾಗಿ ವಾದ ಮಂಡಿಸಿ, ಶಿವ ದೇವಾಲಯನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂಬ ಪ್ರತಿಪಾದನೆಯನ್ನು ಅಲ್ಲಗಳೆದರು. ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 10ಕ್ಕೆ ನಿಗದಿಪಡಿಸಿತು.

ನೀಲಕಂಠ ದೇವಾಲಯವನ್ನು ಕೆಡವಿ ಜಾಮಾ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಮಹಾಸಭಾದ ಮುಖಂಡ ಮುಖೇಶ್ ಪಟೇಲ್ ಎರಡು ವರ್ಷಗಳ ಹಿಂದೆ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಪರ ವಕೀಲರು ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ತಮ್ಮ ವಾದ ಮಂಡಿಸಿದ್ದಾರೆ.

'ಮಸೀದಿ ಇರುವ ಸ್ಥಳದಲ್ಲಿ ನೀಲಕಂಠ ದೇವಾಲಯವಿತ್ತು ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ. ವಿಗ್ರಹಗಳು ಮತ್ತು ಪ್ರಾಚೀನ ಕಾಲದ ಕಂಬಗಳು ಅಲ್ಲಿವೆ. ಮುಸ್ಲಿಂ ದೊರೆಗಳು ದೇವಾಲಯ ಕೆಡವಿ, ಶಿವಲಿಂಗವನ್ನು ಹೊರಗೆ ಎಸೆದಿದ್ದಾರೆ. ಶಿವಲಿಂಗವನ್ನು ಕಂಡ ವ್ಯಕ್ತಿಯೊಬ್ಬರು ಅದನ್ನು ಸಮೀಪದ ದೇವಸ್ಥಾನದಲ್ಲಿ ಇರಿಸಿದ್ದಾರೆ' ಎಂದು ಪಟೇಲ್‌ ಅವರು ಅರ್ಜಿಯಲ್ಲಿ ಹೇಳಿದ್ದಾರೆ. ದೆಹಲಿ ಸುಲ್ತಾನನಾಗಿದ್ದ ಕುತುಬುದ್ದೀನ್‌ ಐಬಕ್‌ನ ಕಾಲದಲ್ಲಿ ಮಸೀದಿಯನ್ನು ಕೆಡವಲಾಗಿದೆ ಎಂದಿದ್ದಾರೆ.

ಮಸೀದಿ ಪರ ವಕೀಲರು ಇದನ್ನು ಅಲ್ಲಗಳೆದಿದ್ದು, '850 ವರ್ಷಗಳಷ್ಟು ಹಳೆಯದಾದ ಮಸೀದಿ ಇದಾಗಿದ್ದು, ಅದಕ್ಕೂ ಮೊದಲು ಅಲ್ಲಿ ಯಾವುದೇ ದೇವಾಲಯ ಇರಲಿಲ್ಲ. ಗುಲಾಂ ರಾಜವಂಶದ ಸುಲ್ತಾನ್ ಶಂಸುದ್ದೀನ್ ಅಲ್ತಮಶ್ 1223ರಲ್ಲಿ ಮಸೀದಿ ನಿರ್ಮಿಸಿದ್ದಾನೆ' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries