ಮುಳ್ಳೇರಿಯ: ಆದೂರು ಭಗವತಿಕ್ಷೇತ್ರದಲ್ಲಿ ಜ.19ರಿಂದ 24ರವರೆಗೆ ನಡೆಯಲಿರುವ ಪೆರುಂಕಳಿಯಾಟ ಮಹೋತ್ಸವದ ಧ್ವಜಸ್ತಂಭ ಹಾಗೂ ಮುಡಿ ಕಟ್ಟುವ ಕಾರ್ಯಕ್ರಮ ದೈವಸ್ಥಾನದ ಪದಾಧಿಕಾರಿಗಳು ಹಾಗೂ ಆದೂರು ಗುತ್ತು ತರವಾಡು ಸದಸ್ಯರ ಸಮ್ಮುಖದಲ್ಲಿ ನಿನ್ನೆ ನಡೆಯಿತು.
ಶನಿವಾರ ಧ್ವಜಸ್ತಂಭ ಹಾಗೂ ಮುಖ್ಯ ಗೋಪುರ ಕಡಿಯಲಾಯಿತು. ಪೆರುಂಕಳಿಲಿಯಾಟ್ಟವನ್ನು ಗ್ರಾಮದ ಹಬ್ಬವನ್ನಾಗಿ ನಿರ್ವಹಿಸಲು ಸ್ಥಳೀಯರು ಸಿದ್ದತೆ ನಡೆಸುತ್ತಿದ್ದಾರೆ. ಆದೂರು ಭಗವತಿ ಕ್ಷೇತ್ರ ಉತ್ಸವದ ಧ್ವಜಸ್ತಂಭವನ್ನು ಈ ಹಿನ್ನೆಲೆಯಲ್ಲಿ ಸಕಲ ವಿಧಿವಿಧಾನಗಳೊಂದಿಗೆ ತರಲಾಯಿತು.