ವಾಷಿಂಗ್ಟನ್ (AP): ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (ಸಿಬಿಪಿ) ಆಯುಕ್ತರಾಗಿ ರಾಡ್ನಿ ಸ್ಕಾಟ್ ಅವರನ್ನು ನೇಮಕವಾಗಿದ್ದಾರೆ. ಇವರು, ಹಿಂದೆ ಗಡಿ ಗಸ್ತು ಪಡೆಯ ಮುಖ್ಯಸ್ಥರಾಗಿದ್ದರು.
ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಕಾಟ್ ಅವರ ನೇಮಕ ಘೋಷಿಸಿದ್ದಾರೆ.
ದೇಶದಲ್ಲಿ ಕಾನೂನುಬಾಹಿರ ವಲಸೆ ತಡೆಯುವ ಹೊಣೆಯನ್ನು ಸಿಬಿಪಿ ನಿಭಾಯಿಸಲಿದೆ.
ಟ್ರಂಪ್ ಅವರ ಕಠಿಣವಾದ ವಲಸೆ ಮತ್ತು ಗಡಿ ನೀತಿಗಳನ್ನು ಸ್ಕಾಟ್ ಅವರು ಬೆಂಬಲಿಸುತ್ತಿದ್ದರು. ಈ ನೇಮಕದಿಂದಾಗಿ ಅಮೆರಿಕದಲ್ಲಿ ವಸಲೆ ಕುರಿತ ನೀತಿಗಳು ಇನ್ನಷ್ಟು ಬಿಗಿಗೊಳ್ಳಲಿವೆ ಎನ್ನಲಾಗುತ್ತಿದೆ.
ಸಿಬಿಪಿ ಪ್ರಸ್ತುತ ಸುಮಾರು 60 ಸಾವಿರ ಉದ್ಯೋಗಿಗಳನ್ನು ಒಳಗೊಂಡಿದ್ದು, ಒಳಾಡಳಿತ ಭದ್ರತೆ ಇಲಾಖೆಯ ವ್ಯಾಪ್ತಿಗೆ ಒಳಪಡಲಿದೆ. ಗಡಿ ಗಸ್ತು ಇದರ ಕಾರ್ಯವ್ಯಾಪ್ತಿಗೆ ಬರಲಿದ್ದು, ಕಾನೂನುಬಾಹಿರ ವಲಸೆ, ವಾಣಿಜ್ಯ ವಹಿವಾಟು ತಡೆಯುವುದು ಸಿಬಿಪಿಯ ಪ್ರಮುಖ ಹೊಣೆಗಾರಿಕೆಯಾಗಿದೆ.
ಅಲ್ಲದೆ, ಶಸ್ತ್ರಾಸ್ತ್ರ ಮತ್ತು ಕಾರ್ಯತಂತ್ರ ಯೋಜನೆಗಳ ಸಹಾಯಕ ನಿರ್ದೇಶಕರಾಗಿ ಸೆಲೆಬ್ ವಿಟೆಲ್ಲೊ ಅವರನ್ನು ನೇಮಿಸಲಾಗಿದೆ ಎಂದು ಟ್ರಂಪ್ ಅವರು ಪ್ರಕಟಿಸಿದ್ದಾರೆ.