ಕಾಸರಗೋಡು: 2024-25 ನೇ ಶೈಕ್ಷಣಿಕ ವರ್ಷದ ಸಲಕರಣೆ ಬಿಡುಗಡೆ ಮತ್ತು ಶೈಕ್ಷಣಿಕ ವಿಚಾರ ಸಂಕಿರಣ ಚೆರ್ಕಳ ಮಾರ್ಥೋಮಾ ಎಚ್‍ಎಸ್‍ಎಸ್‍ನಲ್ಲಿ ಆಙಯೋಜಿಸಲಾಯಿತು. ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಕೀಲೆ ಎಸ್.ಎನ್ ಸರಿತಾ ಉದ್ಘಾಟಿಸಿದರು. ಕಾಸರಗೋಡು ಡಯಟ್ ಪ್ರಾಂಶುಪಾಲ ಡಾ.ಕೆ.ರಘುರಾಮ ಭಟ್ ಉದ್ಘಾಟಿಸಿದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ.ವಿ.ಮಧುಸೂದನ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಹೈಯರ್ ಸೆಕೆಂಡರಿ ಪ್ರಾದೇಶಿಕ ಉಪನಿರ್ದೇಶಕ ಆರ್.ರಾಜೇಶ್ ಕುಮಾರ್ ಭಾಗವಹಿಸಿದ್ದರು. ಕಾಸರಗೋಡು ಡಯಟ್ ಉಪನ್ಯಾಸಕ ವಿನೋದಕುಮಾರ್ ಕುಟ್ಟಮತ್, ವಿ.ಮಧುಸೂದನನ್ ಮತ್ತು ಎ.ಗಿರೀಶ್ ಬಾಬು ವಿವಿಧ ವಿಷಯಗಳ ಕುರಿತು ತರಗತಿ ನಡೆಸಿಕೊಟ್ಟರು. 'ಕೈಟ್'ಜಿಲ್ಲಾ ಸಂಯೋಜಕ ರೋಜಿ ಜೋಸೆಫ್, ವಿದ್ಯಾಕಿರಣ ಸಂಯೋಜಕ ಎಂ.ಸುನೀಲ್‍ಕುಮಾರ್, ಕಾಸರಗೋಡು ಡಿಇಒ ವಿ.ದಿನೇಶ, ಕಾಞಂಗಾಡು ಡಿಇಒ ಕೆ.ಅರವಿಂದ, ಚೆರ್ಕಳ ಮಾರ್ಥೋಮಾ ಎಚ್‍ಎಸ್‍ಎಸ್ ಆಡಳಿತಾಧಿಕಾರಿ ಫಾದರ್ ಮ್ಯಾಥ್ಯೂ ಬೇಬಿ, ಕಾಸರಗೋಡು ಎಇಒ ಆಗಸ್ಟಿನ್ ಬರ್ನಾಡ್ ಮೊಂತೆರಿಯೊ ಉಪಸ್ಥಿತರಿದ್ದರು.