ಕುಂಬಳೆ: ತೆಂಗಿನಕಾಯಿ ಕೀಳುವ ಮಧ್ಯೆ ತೆಂಗಿನ ಮರದಿಂದ ಬಿದ್ದು ಕುಂಬಳೆ ಸನಿಹದ ಬಂಬ್ರಾಣ, ಅಂಡಿತಡ್ಕ ಕರಿಗುಡ್ಡ ನಿವಾಸಿ ಜನಾರ್ದನ(48) ಮೃತಪಟ್ಟಿದ್ದಾರೆ. ವಾರದ ಹಿಂದ ಬಂಬ್ರಾಣ, ಮುವ್ವಂ ಎಂಬಲ್ಲಿನ ಖಾಸಗಿ ವ್ಯಕ್ತಿಯ ಹಿತ್ತಿಲಲ್ಲಿ ತೆಂಗಿನಕಾಯಿ ಕೀಳುತ್ತಿದ್ದಾಗ ಬಿದ್ದಿದ್ದು, ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕುಂಬಳೆ ಠಾಣೆ ಪೆÇಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.